Latest Posts

ಮುಸ್ಲಿಂ ಯೂತ್ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಧ್ವಜಾರೋಹಣ ಹಾಗೂ ಸದಸ್ಯತ್ವ ಅಭಿಯಾನ ಉದ್ಘಾಟನೆ ಕಾರ್ಯಕ್ರಮ

ಮಂಗಳೂರು : ಮುಸ್ಲಿಂ ಯೂತ್ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವು ಬಿ.ಸಿ ರೋಡಿನ ಮಿತ್ತಬೈಲಿನಲ್ಲಿ ನಡೆಯಿತು. ಮುಸ್ಲಿಂ ಯೂತ್ ಲೀಗ್ ಜಿಲ್ಲಾಧ್ಯಕ್ಷರಾದ ನೌಶಾದ್ ಮಲಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇರ್ಶಾದ್ ದಾರಿಮಿ ಅಲ್-ಜಝರಿ ಧ್ವಜಾರೋಹಣಗೈದರು.msf ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಝಬೀರ್ ಕೊಡಾಜೆ ಭಾಷಣಗೈದರು. “ಹಕ್ಕುಗಳಿಗಾಗಿ ಸಂಘಟಿತರಾಗೋಣ… ನ್ಯಾಯಕ್ಕಾಗಿ ಹೋರಾಡೋಣ” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಜಿಲ್ಲಾ ಮಟ್ಟದ ಸದಸ್ಯತ್ವ ಉದ್ಘಾಟಿಸಲಾಯಿತು.

. “ಹಕ್ಕುಗಳಿಗಾಗಿ ಸಂಘಟಿತರಾಗೋಣ… ನ್ಯಾಯಕ್ಕಾಗಿ ಹೋರಾಡೋಣ” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಜಿಲ್ಲಾ ಮಟ್ಟದ ಸದಸ್ಯತ್ವ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ಪಿ ಮುಹಮ್ಮದ್ ಅಲೀ ಅರ್ಶದಿ ಮಿತ್ತಬೈಲು , ಯೂತ್ ಲೀಗ್ ಜಿಲ್ಲಾ ಉಪಾಧ್ಯಕ್ಷರಾದ ನೌಫಲ್ ಅಜ್ಜಿಕಲ್ಲು , ಝೋನಲ್ ಸೆಕ್ರೆಟರಿ ಇಸ್ಹಾಖ್ ಕೌಸರಿ , ಅಮಾನ್ ಆತೂರು , ಮುಸ್ಲಿಂ ಯೂತ್ ಲೀಗ್ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮುಖಂಡರಾದ ನಾಸೀರ್ ಮಿತ್ತಬೈಲು , msf ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀಲ್ ಪೇರಿಮಾರ್ , ಕಾರ್ಯದರ್ಶಿ ಅರಾಫತ್ ಮಿತ್ತಬೈಲು , ಝೋನಲ್ ಸೆಕ್ರೆಟರಿ ಇಬ್ರಾಹಿಂ ಸಾಹಿಲ್ ಎ.ಎಸ್ , ಶಾಹಿದ್ ಶಾಂತಿಅಂಗಡಿ , msf ಬಂಟ್ವಾಳ ವಿಧಾನಸಭಾ ಕ್ಷೇತ್ರ ಜತೆ ಕಾರ್ಯದರ್ಶಿ ನಾಫಿಹ್ ಮಿತ್ತಬೈಲು , ಮೀಡಿಯಾ ಕಾರ್ಯದರ್ಶಿ ಅಬೂಬಕ್ಕರ್ ಶಾಂತಿಅಂಗಡಿ , ಅಶ್ರಫ್ ಶಾಂತಿಅಂಗಡಿ , ರಫೀಖ್ ಶಾಂತಿಅಂಗಡಿ , ಇಮ್ರಾನ್ ತಲಪಾಡಿ , ರಹ್ಮಾನ್ ಕೊಡಂಗೆ , ರಹೀಝ್ ಮಿತ್ತಬೈಲು , ಅಶ್ವಾನ್ ಎ.ಎಸ್ , ಅಝೀಮ್ ಮಿತ್ತಬೈಲು ಮತ್ತಿತ್ತರರು ಇದ್ದರು. ಜಿಲ್ಲಾ ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ ಇಶ್ರಾರ್ ಗೂಡಿನಬಳಿ ಸ್ವಾಗತಿಸಿ , ವಂದಿಸಿದರು.

Share this on:
error: Content is protected !!