Latest Posts

ಹಾಯಾತುಲ್ ಇಸ್ಲಾಂ ಶಾಲೆ ಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ

ಬಿ.ಸಿರೋಡ್ : ಹಾಯಾತುಲ್ ಇಸ್ಲಾಂ ಶಾಲೆಯಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಕೋವಿಡ್ ನಿಯಮಗಳನ್ನು ಅನುಸರಿಸಿ ಅತ್ಯಂತ ಸರಳ ಸಂಭ್ರಮಗಳಿಂದ ಆಚರಿಸಲಾಯಿತು. ಶಾಲಾ ಕಾರ್ಯದರ್ಶಿ ಯಾದ ರಶೀದ್ ಗೂಡಿನಬಳಿ ಧ್ವಜಾರೋಹಣ ಗೈದು ಶುಭಹಾರೈಸಿದರು. ಉದ್ಘಾಟನೆ ಯನ್ನು ಶಾಲಾ ವ್ಯವಸ್ಥಾಪಕರಾದ ರಾಮಚಂದ್ರ ಸರ್ ಸ್ವಾತಂತ್ರ್ಯ ಆಚರಣೆಯ ಮಹತ್ವ ಹಾಗೂ ಪ್ರಸ್ತುತ ಅನಿವಾರ್ಯತೆಗಳ ಬಗ್ಗೆ ಮಾತನಾಡಿದರು.ಕಾರ್ಯಕ್ರಮ ದಲ್ಲಿ 75ನೇ ಸ್ವಾತಂತ್ರದ ಕುರಿತು ಸ್ಥಳೀಯ ಖತಿಬರಾದ ಬಹುಮಾನ್ಯರಾದ ಶಾಫಿ ಫೈಝಿ ಅಲ್ ಇರ್ಫಾನಿ ಉಸ್ತಾದ್ ವಿಷಯ ಮಂಡನೆಯನ್ನು ನಡೆಸಿದರು.

ಶಾಲಾ ಕಾರ್ಯದರ್ಶಿ ಯಾದ ರಶೀದ್ ಗೂಡಿನಬಳಿ ಧ್ವಜಾರೋಹಣಗೈದು

ಕಾರ್ಯಕ್ರಮ ದಲ್ಲಿ ಹಮೀದ್ ಮುಸ್ಲಿಯಾರ್,ಕರೀಂ ಸಾಹೇಬ್,ಅಬ್ದುಲ್ ರಹ್ಮನ್ (ಶಾಲಾ ಅಧ್ಯಕ್ಷರು), ಶಾಲಾ ಮುಖ್ಯೋಪಾಧ್ಯಾಯರಾದ ತಸ್ಮೀನ್, ಸಹ ಶಿಕ್ಷಕರಾದ ಮುಫೀದ, ಫಾತಿಮಾ, ಶಾಮೀಮಾ, ಧಿವ್ಯ, ಸೌಮ್ಯ ಹಾಗೂ ಜಮಾತ್ ಸದಸ್ಯರು ನಾಡಿನ ಹಿರಿಯರು,ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಕ್ಲಾರ್ಕ್ ಆಯಿಷಾ ಮಿಶ್ರಿಯ ಸರ್ವರನ್ನೂ ಸ್ವಾಗತಿಸಿ,ವಂದಿಸಿದರು. ಎಂದು ತ್ವಯ್ಯಿಬ್ ಫೈಝಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Share this on:
error: Content is protected !!