ಮಂಗಳೂರು : ದೇಶದಲ್ಲಿ ಕಾನೂನು ಇದೆ, ಒಂದು ವೇಳೆ ಕಾನೂನಿನ ಚೌಕಟ್ಟನ್ನು ಮೀರಿ ರಥ ಯಾತ್ರೆ ಮಾಡುವಂತಹ ಸನ್ನಿವೇಶಗಳು ಕಂಡು ಬಂದಿದ್ದರೆ ಕಾನೂನು ಪಾಲಕರ ಗಮನಕ್ಕೆ ತರಬಹುದಿತ್ತು.
ಕಾನೂನಿನ ಮೂಲಕ ಆ ರಥವನ್ನು ತಡೆಯಬಹುದಿತ್ತು.
ಅದು ಬಿಟ್ಟು ಏಕಾಏಕಿ ಕಾನೂನು ಕೈಗೆತ್ತಿಕೊಳ್ಳುವುದು, ನೈತಿಕ ಪೋಲಿಸ್ ಗಿರಿ ಸರಿಯಲ್ಲ. ಎಂದು ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೇಳಿದರು.
ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದವ, ಅವನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಯಾರು ಕೂಡ ಒಪ್ಪಲು ಸಾಧ್ಯವಿಲ್ಲ.
ಆದರೆ ಅದರ ಹೆಸರಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಕೂಡ ಸಮರ್ಥಿಸಲು ಸಾಧ್ಯವಿಲ್ಲ.
ಕಬಕದಲ್ಲಿ ಪಂಚಾಯಿತಿ ವತಿಯಿಂದ ಸ್ವಾತಂತ್ರ್ಯ ರಥೋತ್ಸವ ನಡೆದಿತ್ತು. ಅವರ ಫ್ಲೆಕ್ಸ್ ನಲ್ಲಿ ಸಾವರ್ಕರ್ ಫೋಟೋ ಇತ್ತು ಎಂಬ ಕಾರಣಕ್ಕೆ ಎಸ್ಡಿಪಿಐ ನವರು ತಡೆಯಲು ಮುಂದಾಗಿದ್ದು ಇದು ಜಿಲ್ಲಾದ್ಯಂತ ಸುದ್ದಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಶಾಸಕರು ಈ ಮಾತನ್ನು ಹೇಳಿದ್ದಾರೆ.