Latest Posts

ಉಳ್ಳಾಲ, ಪ್ರಚೋದನಕಾರಿ ಘೋಷಣೆ ಮತ್ತು ಅಕ್ರಮವಾಗಿ ಮನೆಗೆ ನುಗ್ಗಲು ಯತ್ನಿಸಿದ ಶರಣ್ ಮತ್ತು ಕಾರ್ಯಕರ್ತರ ವಿರುದ್ಧ ದೂರು ದಾಖಲು

ಮಂಗಳೂರು, ಆ.19: ಉಲ್ಲಾಳದಲ್ಲಿ ಉದ್ಯಮಿ ಬಿ.ಎಮ್ ಪಾಷಾ ರವರ ಮನೆಯ ಮುಂದೆ ಅಕ್ರಮ ಕೂಟ ಕಟ್ಟಿಕೊಂಡು ಮನೆಗೆ ಅಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಅಬೂಬಕ್ಕರ್ ಎಂಬವರು ದೂರು ದಾಖಲಿಸಿದ್ದಾರೆ

ವಿ.ಎಚ್.ಪಿ ನಾಯಕ ಶರಣ್ ಪಂಪ್ ವೆಲ್ ನೇತೃತ್ವದ ಬಜರಂಗದಳ ಕಾರ್ಯಕರ್ತರು ಆಗಸ್ಟ್ 11 ರಂದು ಉದ್ಯಮಿ ಬಿಎಂ ಪಾಷಾ ರವರ ಮನೆಯ ಮುಂದೆ ಅಕ್ರಮ ಕೂಟ ಕಟ್ಟಿಕೊಂಡು ಒಂದು ಧರ್ಮವನ್ನು ಹೀಯಾಳಿಸಿ ಪ್ರಚೋದನಕಾರಿ ಘೋಷಣೆ ಮೂಲಕ ಮನೆಗೆ ನುಗ್ಗಲು ಪ್ರಯತ್ನ ಪಟ್ಟಿದ್ದಾರೆ ಮಾತ್ರವಲ್ಲ ಪೊಲೀಸರು ಸಕಾಲದಲ್ಲಿ ಬಾರದೆ ಹೋಗಿದ್ದಲ್ಲಿ ಗುಂಪು ಮನೆಯೊಳಗೆ ಪ್ರವೇಶಿಸಿ ದಾಂದಲೆ ನಡೆಸಿ ದೊಡ್ಡ ಅನಾಹುತ ನಡೆಯುವ ಸಾಧ್ಯತೆ ಇತ್ತು. ಶಾಂತಿಯುತವಾಗಿದ್ದ ಉಳ್ಳಾಲ ಪರಿಸರವನ್ನು ಶಾಂತಿ ಕದಡಲು ಯತ್ನಿಸಿದ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬಾಗಿಯಾದ ವಿ.ಎಚ್. ಪಿ ನಾಯಕ ಶರಣ್ ಪಂಪ್ ವೆಲ್ ಮತ್ತು ಆತನ ನೇತ್ರತ್ವದಲ್ಲಿರುವ ಕಾರ್ಯಕರ್ತರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಉಳ್ಳಾಲ ಪೋಲಿಸ್ ಠಾಣೆಗೆ ನೀಡಿದ ದೂರಿನಲ್ಲಿ ಅಬೂಬಕ್ಕರ್ ರವರು ತಿಳಿಸಿದ್ದಾರೆ

Share this on:
error: Content is protected !!