Latest Posts

ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ಜನ್ಮದಿನಾಚರಣೆ.

ಸುಳ್ಯ : ಬ್ಲಾಕ್ ಕಾಂಗ್ರೆಸ್ ಸಮಿತಿ ಸುಳ್ಯ ವತಿಯಿಂದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ಜನ್ಮದಿನಾಚರಣೆ ಇಂದು ಸುಳ್ಯದ ಖಾಸಗಿ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪಿಸಿ ಜಯರಾಮ್ ರವರು ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಿ ಭಾರತವನ್ನು ವೈಜ್ಞಾನಿಕ ವಾಗಿ ಸಂಪರ್ಕ ಕ್ರಾಂತಿ ಮೂಲಕ ಅಭಿವೃದ್ಧಿ ಯ ಪಥದತ್ತ ಕೊಂಡೊಯ್ದ ಧೀಮಂತ ನಾಯಕ ಹಾಗೂ ಪಂಚಾಯತ್ ರಾಜ್ ಮೂಲಕ ಸ್ಥಳೀಯ ಮಟ್ಟದ ಜನರಿಗೆ ನೇರವಾಗಿ ಆಡಳಿತದಲ್ಲಿ ಮತ್ತು ಅಭಿವೃದ್ಧಿ ಯಲ್ಲಿ ನೇರವಾಗಿ ಪಾಲ್ಗೊಳ್ಳಲು ಮತ್ತು ಜನತೆಗೆ ಶಕ್ತಿತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಹೇಳಿದರು.

ಅಲ್ಲದೆ ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ನಾಯಕ ದಿ. ದೇವರಾಜ ಅರಸು ರವರು ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು. ಡಿಸಿಸಿ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ನುಡಿನಮನ ಸುಲ್ಲಿಸಿದರು. ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಅಮೈ, ಇಂಟಕ್ ಅಧ್ಯಕ್ಷರಾದ ಶಾಫಿ ಕುತ್ತಮೊಟ್ಟೆ, ಬ್ಲಾಕ್ ಮಾಧ್ಯಮ ಸಂಯೋಜಕ ಭವಾನಿಶಂಕರ್ ಕಲ್ಮಡ್ಕ, ಇಂಟಕ್ ಪ್ರದಾನ ಕಾರ್ಯದರ್ಶಿ ಮೋಹಿತ್ ಹರ್ಲಡ್ಕ, ಕಚೇರಿ ಮೇಲ್ವಿಚಾರಕ ಗಂಗಾಧರ ಮೇನಾಳ ಉಪಸ್ಥಿತರಿದ್ದರು.

Share this on:
error: Content is protected !!