Latest Posts

ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ
– ಶ್ರೀಮತಿ ವೀಣಾ ಪಿ ಭಟ್ ಆಗ್ರಹ

ಪುತ್ತೂರು : ಇಡೀ ಕರ್ನಾಟಕ ರಾಜ್ಯವನ್ನೇ ತಲ್ಲಣಗೊಳಿದ ಸಾಂಸ್ಕ್ರತಿಕ ನಗರಿ ಪ್ರದೇಶವಾದ ಮೈಸೂರಿನ ನಂದಿ ಬೆಟ್ಟದ ತಪ್ಪಲಿನಲ್ಲಿ ಹೆಣ್ಣುಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡನೀಯವಾಗಿದೆ.
ಕೂಡಲೇ ಸರಕಾರ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಮತಿ ವೀಣಾ ಪಿ ಭಟ್ ಅವರು ಆಗ್ರಹಿಸಿದ್ದಾರೆ.

ಮಾಧ್ಯಮದ ಮುಖಾಂತರ ಮಾತನಾಡಿದ ಅವರು ಮೈಸೂರಿನ ಘಟನೆ ಇಡೀ ರಾಜ್ಯವೇ ತಲೆತಗ್ಗಿಸುವ ಘಟನೆಯಾಗಿದೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ.
ದಿನಗಳೆದಂತೆ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ದೌರ್ಜನ್ಯ ನಡೆಯುತ್ತಿದೆ. ಆರೋಪಿಗಳು ರಾಜರೋಷವಾಗಿ ತಿರುಗಾಟ ನಡೆಸುತ್ತಿದ್ದಾರೆ
ಆರೋಪಿಗಳಿಗೆ ಬಿಜೆಪಿ ಸರಕಾರ ರಕ್ಷಣೆ ನೀಡುತ್ತಿದೆ ಇದರಿಂದ ಇಂತಹ ಪ್ರಕರಣಗಳು ಹೆಚ್ಚಲವಾಗಲು ಕಾರಣವಾಗಿದೆ ಎಂದರು.

ಅಮಾಯಕ ಅದೆಷ್ಟೋ ಹೆಣ್ಣುಮಕ್ಕಳಿಗೆ ಬಿಜೆಪಿ ಸರಕಾರ ತಮ್ಮ ಆಡಳಿತದ ಅವಧಿಯಲ್ಲಿ ಇದುವರೆಗೂ ರಕ್ಷಣೆ ನೀಡಿಲ್ಲ ಇಂತಹ ಜನವಿರೋಧಿ ಸರಕಾರದಿಂದ ಜನಸಾಮಾನ್ಯರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದರು.

ಅದಕ್ಷ ಗ್ರಹಮಂತ್ರಿ ಅರಗ ಜ್ನಾನೇಂದ್ರ ಅವರಿಗೆ ತಿಳುವಳಿಕೆ ಜ್ನಾನದ ಕೊರತೆ ಇದೆ ಇಂತವರು ರಾಜ್ಯದ ಗ್ರಹ ಮಂತ್ರಿಯಾಗಿರುವುದು ನಮ್ಮ ರಾಜ್ಯದ ದುರಂತವಾಗಿದೆ.
ಮಹಿಳೆಯರ ಬಗ್ಗೆ ಗ್ರಹ ಸಚಿವರಿಗೆ ಎಷ್ಟು ಕಾಳಜಿ ಇದೆ ಎಂಬುದು ಸಚಿವರ ಕೆಟ್ಟ ಪದ ಶಬ್ದಗಳಿಂದ ತಿಳಿಯುತ್ತಿದೆ. ಮತ್ತು ಕೂಡಲೇ ರಾಜ್ಯದ
ಗ್ರಹ ಸಚಿವರು ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಮತಿ ವೀಣಾ ಪಿ ಭಟ್ ಅವರು ಆಗ್ರಹ ವ್ಯಕ್ತಪಡಿಸಿದರು.
ಮತ್ತು ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ರಾಜ್ಯ ಸರಕಾರಕ್ಕೆ ಆಗ್ರಹ ವ್ಯಕ್ತಪಡಿಸಿದರು.

Share this on:
error: Content is protected !!