Latest Posts

ಹಯತ್ತುಲ್ ಇಸ್ಲಾಂ ಮದ್ರಸ ಗೂಡಿನಬಳಿ ಯಲ್ಲಿ : ಮುಅಲ್ಲಿಂ ಡೇ ಕಾರ್ಯಕ್ರಮ

ಬಂಟ್ವಾಳ : ಹಯತ್ತುಲ್ ಇಸ್ಲಾಂ ಮದ್ರಸ ಗೂಡಿನಬಳಿ ಯಲ್ಲಿ ಮುಅಲ್ಲಿಂ ಡೇ ಕಾರ್ಯಕ್ರಮವು ವಳಿಯುಲ್ಲಾಹಿ ಮುತ್ತಲಿಬ್ ತಂಗಳ್ ರವರ ಹಾಗೂ ಕಬರ್ ಝಿಯಾರತ್ ನೊಂದಿಗೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.

ಇಹಲೋಕದ ಈ ಜಂಜಾಟಗಳ ನಡುವೆ ಆಧ್ಯಾತ್ಮಿಕತೆಯಡೆಗೆ ಮರಳೋಣ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಎಸ್.ಕೆ.ಎಸ್. ಬಿ.ವಿ ಆಯೋಜಿಸಲಾದ ಆಧ್ಯಾತ್ಮಿಕ ಮಾಸಿಕ ಮಜ್ಲಿಸುನ್ನೂರ್ ಸಂಗಮ ಬಹುಮಾನ್ಯರಾದ ಸದರ್ ಉಸ್ತಾದ್ ಬಶೀರ್ ಅಝ್ ಹರಿ ರವರ ಅಧ್ಯಕ್ಷತೆ ಯಲ್ಲಿ ಜರಗಿತು. ಕಾರ್ಯಕ್ರಮ ದಲ್ಲಿ ಎಸ್.ಕೆ.ಎಸ್. ಬಿ.ವಿ ಚೈರ್ಮನ್ ತ್ವಯ್ಯಿಬ್ ಫೈಝಿ ಉದ್ಘಾಟಿಸಿ ಮಾತನಾಡಿದ ಅವರು ಸಮಸ್ತ ದ ಅಂಗ ಸಂಸ್ಥೆ ಯಾದ SKIMVB ಇದರ ಕೆಳಗೆ ಕಾರ್ಯಾಚರಿಸುತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ಮುಅಲ್ಲಿಮರಿ ಗಾಗಿ ಸಮಸ್ತ ಕೆರಳ ಜಂಯ್ಯತುಲ್ ಉಲಮ ನಡೆಸಿ ಬರುವಂತಹ ಒಂದು ದಿನವಾಗಿದೆ ಮುಅಲ್ಲಿಂ ಡೇ ಎಂದು ಸವಿಸ್ತಾರವಾಗಿ ವಿಷಯ ಮಂಡನೆ ನಡೆಸಿದರು. ಅಬ್ದುಲ್ ಹಮೀದ್ ಮುಸ್ಲಿಯಾರ್, ಅಬ್ದುಲ್ ಖಾದರ್ ಮದನಿ ,ಫೈಝಲ್ ಅನ್ಸಾರಿ, ಫಝಲ್ ರಾಹ್ಮನ್ ಮುಸ್ಲಿಯಾರ್, ಕರೀಂ ಸಾಹೇಬ್ ಹಾಗೂ ವಿದ್ಯಾರ್ಥಿನಿ ಗಳಾದ ಇನ್ಶ ಹರ್ಷ, ದಿಲ್ಶಾದ್ ಅಶಂಸ ಭಾಷಣ ನಡೆಸಿದರು.

ಎಸ್.ಕೆ.ಎಸ್. ಬಿ.ವಿ ಚೈರ್ಮನ್ ತ್ವಯ್ಯಿಬ್ ಫೈಝಿ ಉದ್ಘಾಟಿಸಿದರು
ಕಾರ್ಯಕ್ರಮದಲ್ಲಿ 250 ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಭಾಗವಹಿಸಿದರು .
ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಬಿ.ವಿ ವತಿಯಿಂದ ಉಸ್ತಾದರನ್ನು ಗಿಫ್ಟ್ ಕೊಡುವುದರ ಮೂಲಕ ಸನ್ಮಾನಿಸಲಾಯಿತು.

ಅದೇರೀತಿ ಕಳೆದ 45 ವರ್ಷಗಳಿಂದ ಗೂಡಿನಬಳಿ ಮದ್ರಸ ಅಧ್ಯಾಪಕರಿಗೆ ಊಟದ ತರುವಂತಹ ಮಹಮ್ಮದಾಕ ರವರಿಗೆ ಸನ್ಮಾನಿಸಲಾಯಿತು.

ಮಹಮ್ಮದಾಕ ರವರಿಗೆ ಸನ್ಮಾನಿಸಲಾಯಿತು

ಕಾರ್ಯಕ್ರಮ 250 ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಭಾಗವಹಿಸಿದರು . ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್. ಬಿ.ವಿ ಅಧ್ಯಕ್ಷರಾದ ಅಲ್ಫಾಝ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Share this on:
error: Content is protected !!