Latest Posts

ಧಾರ್ಮಿಕ ಕೇಂದ್ರಗಳನ್ನು ಧ್ವಂಸ ಮಾಡಿರುವ ರಾಜ್ಯ ಸರ್ಕಾರದ ನಡೆ ಖಂಡನೀಯವಾಗಿದೆ: ವೀಣಾ ಪಿ ಭಟ್ ಭರಣ್ಯ

ಪುತ್ತೂರು: ಕರ್ನಾಟಕ ರಾಜ್ಯದಲ್ಲಿ ಧ್ವಂಸ ಮಾಡಿರುವ ಧಾರ್ಮಿಕ ಕೇಂದ್ರಗಳನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಮತಿ ವೀಣಾ ಪಿ ಭಟ್ ಭರಣ್ಯ ಅವರು ಸರಕಾರಕ್ಕೆ ಆಗ್ರಹಿಸಿದ್ದಾರೆ.

ದೇವಸ್ಥಾನದ ಧ್ವಂಸ ಕಾರ್ಯಾಚರಣೆ ಬಿಜೆಪಿ ಸರ್ಕಾರದ ಪ್ರಾಯೋಜಕತ್ವದಲ್ಲೇ ನಡೆದಿದೆ.
ಮೈಸೂರಲ್ಲಿ ದೇಗುಲ ಧ್ವಂಸ ಮಾಡಿದ್ದಕ್ಕೆ ಜಿಲ್ಲಾಧಿಕಾರಿ ತಹಶಿಲ್ದಾರ್ ಕಡೆಗೆ ಬೊಟ್ಟು ಮಾಡುತ್ತಾರೆ.
ಸರ್ಕಾರದ ಅನುಮತಿ ಇಲ್ಲದೆ ದೇವಾಲಯ ಕೆಡಹುವ ಧೈರ್ಯ ರಾಜ್ಯದ ಯಾವ ಸರ್ಕಾರಿ ಅಧಿಕಾರಿಗಿದೆ ಎಂದು ಪ್ರಶ್ನಿಸಿದರು.

ಸುಪ್ರೀಂಕೋರ್ಟ್ ನ ಅದೆಷ್ಟೋ ಆದೇಶಗಳು ಇನ್ನೂ ಧೂಳು ತಿನ್ನುತ್ತಿವೆ.
ಹಾಗಿರುವಾಗ ಈ ಆದೇಶವನ್ನು ಮಾತ್ರ ತರಾತುರಿಯಲ್ಲಿ ಜಾರಿಗೊಳಿಸುವ ಅಗತ್ಯವೇನಿತ್ತು ? ಎಂದು ಪ್ರಶ್ನಿಸಿದರು.

ಯುಪಿಎ ಸರ್ಕಾರ ಇದ್ದಾಗಲೂ ಸುಪ್ರೀಂ ಆದೇಶವಿತ್ತು.
ಆದರೂ ಧಾರ್ಮಿಕ ಕೇಂದ್ರಗಳ‌ ಧ್ವಂಸ ಕಾರ್ಯಕ್ಕೆ ಕೈ ಹಾಕಿರಲಿಲ್ಲ
ದೇವಸ್ಥಾನಗಳನ್ನು ಕೆಡವಲು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಕಾಂಗ್ರೆಸ್ ಪಕ್ಷ ಎಂದೂ ಇಂತಹ ಕೆಲಸಕ್ಕೆ ಕೈ ಹಾಕಲ್ಲ ಎಂದರು

ದೇವಾಲಯ ಧ್ವಂಸ ವಿರುದ್ಧ ಹಿಂದು ಸಂಘಟನೆಯ ಪ್ರತಿಭಟನೆ ಕೇವಲ ನಾಟಕ ಕೇಂದ್ರ ರಾಜ್ಯದಲ್ಲಿ ಇವರದ್ದೇ ಸರ್ಕಾರ ಇರುವಾಗ ಪ್ರತಿಭಟನೆ ಮಣ್ಣೆರಚುವ ತಂತ್ರ ಎಂದು ಆರೋಪಿಸಿದರು

Share this on:
error: Content is protected !!