Latest Posts

ವಿಖಾಯ ದಿನದ ಪ್ರಯುಕ್ತ SKSSF ಆತೂರು ಕ್ಲಸ್ಟರ್ ವತಿಯಿಂದ ಸ್ವಚ್ಛತೆ ಕಾರ್ಯಕ್ರಮ

ಆತೂರು : ಮಹಾತ್ಮಾ ಗಾಂಧಿ ದಿನದ ಪ್ರಯುಕ್ತ SKSSF ವಿಖಾಯ ಡೇ ಪ್ರಯುಕ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭಗೊಂಡ ಹಿನ್ನಲೆಯಲ್ಲಿ ಶಾಲಾ ಪರಿಸರವು ಗಿಡಗಳಿಂದ ತುಂಬಿದ್ದು ಶಾಲೆಯ ಮುಖ್ಯ ಗುರುಗಳು ಶೇಖರ ಸರ್ ರವರು SKSSF ಆತೂರು ಕ್ಲಸ್ಟರ್ ನಲ್ಲಿ ಕೇಳಿಕೊಂಡಾಗ ತಕ್ಷಣ ಸ್ಪಂದಿಸಿ ಗoಡಿಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಾಗು ಅಂಗನವಾಡಿ ಸುತ್ತ ಮುತ್ತ
ಸ್ವಚ್ಛತೆ ಮಾಡಲಾಯಿತು.

ಸ್ವಚ್ಛತಾ ಕಾರ್ಯಕ್ರಮದ ಉಸ್ತುವಾರಿಯನ್ನು SKSSF ಆತೂರು ಕ್ಲಸ್ಟರ್ ಅಧ್ಯಕ್ಷರಾದ ಸಿದ್ದಿಕ್.ಎನ್ ವಹಿಸಿದರು. ರಝಕ್ ದಾರಿಮಿ ನೆರoಕಿ, ಆಸೀಫ್, ಖಲoದರ್, ಲತೀಫ್, ರಾಹಿಲ್, ಅಝೀಝ್ ಹಳ್ಯಾರ, ಅಝೀಝ್ ಪಲ್ತಾಡಿ, ಇಸ್ಮಾಯಿಲ್ ಆತೂರು ಬೈಲು, ಇಸ್ಮಾಯಿಲ್ ಪಲ್ತಾಡಿ, ಹಾರಿಸ್ ಗಂಡಿಬಾಗಿಲು, ಫಝಲ್ ಜಿ, ಶಫಿಕ್ ಜಿ, ಸುಹೆಯಿಲ್ ಜಿ, ನಿಝರ್ ಕೆ ಕೆ ಕ್ಯಾಂಪಸ್ ವಿಂಗ್ ವಿದ್ಯಾರ್ಥಿಗಳು ಹಾಗೂ ಕ್ಲಸ್ಟರ್ ವಿಖಾಯ ಕಾರ್ಯಕರ್ತರು ಉಪಸ್ಥಿದ್ದರು.

Share this on:
error: Content is protected !!