ಮಂಗಳೂರು : ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರವಾದಿ (ಸ.ಅ) ಅವರನ್ನು ನಿಂದಿಸಿ , ಅವಹೇಳನಕಾರಿ ಘೋಷಣೆ ಕೂಗಿದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲು ಹಾಗೂ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮಂಗಳೂರು ನಗರ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಅಬ್ದುಲ್ ಖಾದರ್ ಜೆಪ್ಪು , ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್ ಬಂದರ್ , ಸದಸ್ಯರಾದ ಬಿ.ಎ ಮುಹಮ್ಮದ್ , ಅಬ್ದುಲ್ ಸತ್ತಾರ್ ಬಂದರ್ , ಮುಸ್ಲಿಂ ಲೀಗ್ ಬೆಂಗರೆ ವಲಯ ಕಾರ್ಯದರ್ಶಿ ಅಲ್ತಾಫ್ ಬೆಂಗರೆ ಮತ್ತಿತ್ತರರು ಇದ್ದರು.
ಗಂಗೊಳ್ಳಿಯಲ್ಲಿ ಪ್ರವಾದಿ ನಿಂದನೆ – ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಮನವಿ
