Latest Posts

ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಮಾತನಾಡಲು ಚೈತ್ರ ಕುಂದಾಪುರ ಅವಳಿಗೆ ನೈತಿಕತೆ ಇಲ್ಲ
ಜಿ.ಎ ಶಂಸುದ್ದೀನ್ ಅಜ್ಜಿನಡ್ಕ

ಮಂಗಳೂರು : ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಚೈತ್ರ ಕುಂದಾಪುರ ಅವರನ್ನು ಬಂಧಿಸುವಂತೆ ದ.ಕ‌.ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಮಾಧ್ಯಮದ ಮೂಲಕ ಪೋಲಿಸ್ ಇಲಾಖೆಗೆ ಮನವಿ ಮಾಡಿದ್ದಾರೆ

ಬುದ್ದಿವಂತರ ವಿದ್ಯಾವಂತರ ಜಿಲ್ಲೆಯಾಗಿರುವ ದ.ಕ.ಜಿಲ್ಲೆಯ ಸುರತ್ಕಲ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಚೈತ್ರ ಕುಂದಾಪುರ ಅವರ ಹೇಳಿಕೆ ಖಂಡನೀಯವಾಗಿದೆ
ಇಂತಹ ಟೊಳ್ಳು ಬೆದರಿಕೆಗೆ ಮುಸ್ಲಿಂ ಸಮಾಜ ಭಯಪಡಲ್ಲ ಎಂದರು

ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಇಲ್ಲಿ ಹಲವು ಧರ್ಮ ಹಲವು ಭಾಷೆ ಹಲವು ಸಂಸ್ಕೃತಿಗಳನ್ನು ಒಳಗೊಂಡು ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಬೌದ್ದ ಸಿಖ್ ಧರ್ಮದ ಜನತೆ ಅನೋನ್ಯ ಪರಸ್ಪರ ಪ್ರೀತಿ ವಿಶ್ವಾಸದ ಸೇತುವೆಯಾಗಿ ಜೀವನ ನಡೆಸುತ್ತಿದ್ದು ಇಂತಹ ಸಮಯದಲ್ಲಿ ಬೆರಳೆಣಿಕೆಯಷ್ಟು ಜನರು ಜಿಲ್ಲೆಯಲ್ಲಿ ಕೋಮು ಗಲಭೆಯ ಸಂಚು ರೂಪಿಸಿದ್ದು ಇವರಲ್ಲಿ ಚೈತ್ರಾ ಕುಂದಾಪುರ ಒಬ್ಬಳಾಗಿದ್ದಾಳೆ ಇವಳನ್ನು ತಕ್ಷಣ ಬಂಧಿಸಿ ಜಿಲ್ಲೆಯಲ್ಲಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಿ ಜಿಲ್ಲೆಯ ಸೌಹರ್ದತೆಯನ್ನು ಉಳಿಸುವ ಕೆಲಸ ಕಾರ್ಯಗಳನ್ನು ಪೋಲಿಸ್ ಇಲಾಖೆ ಮಾಡಬೇಕಾಗಿದೆ ಎಂದರು

ಮುಸ್ಲಿಂ ಮನೆಗೆ ಬಂದು ಮುಸ್ಲಿಂ ಮಹಿಳೆಯರ ಹಣೆಗೆ ಕುಂಕುಮ ಇಟ್ಟು ಮತಾಂತರ ಮಾಡ್ತೇನೆ ಎನ್ನುವ ಚೈತ್ರ ಕುಂದಾಪುರ ಇವಳ ಹೇಳಿಕೆ ಖಂಡನೀಯವಾಗಿದೆ
ಇವಳ ಟೊಳ್ಳು ಮಾತಿಗೆ ಮುಸ್ಲಿಂ ಸಮುದಾಯ ಭಯಪಡಲ್ಲ ಎಂದರು

ಹಿಂದೂಮ್ಮೆ ಇದೇ ಚೈತ್ರ ಕುಂದಾಪುರ ಹಿಂದೂ ಕಾರ್ಯಕರ್ತರ ಜೊತೆ ಸುಬ್ರಮಣ್ಯ ಪಂಜದಲ್ಲಿ ಚೈನ್ ವಿಚಾರವಾಗಿ ಗಲಾಟೆ ಮಾಡಿ ಕೊನೆಗೆ ಚೈನ್ ಸಿಗದೇ ಬರಿಗೈಯಲ್ಲಿ ಕುಂದಾಪುರಕ್ಕೆ ವಾಪಸಾಗಿದ್ದು ನಮಿಗೆ ನೆನಪಿದೆ
ಮೊದಲು ಚೈನ್ ಪಡೆಯುವ ಕೆಲಸ ಮಾಡಿ
ಆಮೇಲೆ ಉಳಿದ ವಿಚಾರ ಮಾತನಾಡಿ ಎಂದು ವ್ಯಂಗ್ಯವಾಡಿದರು

ಮುಸ್ಲಿಂ ಸಮಾಜ ಸದಾ ಶಾಂತಿ ಸಹನೆಯನ್ನು ಕಾಣುವ ಧರ್ಮವಾಗಿದೆ
ಚೈತ್ರ ಇವಳ ಇಂತಹ ಹೇಳಿಕೆ ಕಂಡನೆ ಮುಸ್ಲಿಂ ಸಮಾಜ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಿದೆ ಎಂದರು

Share this on:
error: Content is protected !!