Latest Posts

ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿದ ಯುಪಿ ಸರ್ಕಾರದ ನಡೆ ಖಂಡನೀಯವಾಗಿದೆ
ಆಸ್ಮಾ ಗಟ್ಟಮನೆ ಆಕ್ರೋಶಪುತ್ತೂರು : ಇತ್ತೀಚೆಗೆ ರೈತರ ಮೇಲೆ ಕಾರು ಚಲಾಯಿಸಿ ರೈತರನ್ನು ಕೊಂದ ಯುಪಿ ಸರ್ಕಾರದ ನಡೆಯನ್ನು ಖಂಡಿಸಿ ಸಾವನ್ನಪ್ಪಿದ ಕುಟುಂಬದ ಮನೆಗೆ ತೆರಳಿದಾಗ ಪ್ರಿಯಾಂಕಾ ಗಾಂಧಿಯವರನ್ನು ತಡೆದು ಬಂಧನ ಮಾಡಿದ ಉತ್ತರ ಪ್ರದೇಶ ಸರ್ಕಾರದ ನಡೆ ಖಂಡನೀಯವಾಗಿದೆ ಎಂದು ಕೆದುಂಬಾಡಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷರು, ಕಾಂಗ್ರೆಸ್‌ ನಾಯಕಿ ಶ್ರೀಮತಿ ಆಸ್ಮಾ ಗಟ್ಟಮನೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮ ಹೇಳಿಕೆ ಮೂಲಕ ಮಾತನಾಡಿದ ಅವರು ಉತ್ತರ ಪ್ರದೇಶ ಸರ್ಕಾರ ಗೂಂಡಾಗಳಿಗೆ ರಕ್ಷಣೆ ಕೊಡುವ ಸರ್ಕಾರವಾಗಿದೆ

ಉತ್ತರ ಪ್ರದೇಶದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಹೆಚ್ಚು ಹಿಂಸಾಚಾರ ದೌರ್ಜನ್ಯ ಮಹಿಳೆಯರ ಮೇಲೆ ಅತ್ಯಾಚಾರ ಮೊದಲಾದ ಘಟನೆಗಳು ನಡೆದಿದೆ ಹೊರತು ಅಭಿವೃದ್ಧಿ ಕಾಣಲಿಲ್ಲ ಎಂದರು

ಮುಂಬರುವ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್‌ ನಾಯಕಿ ಶ್ರೀಮತಿ ಆಸ್ಮಾ ಗಟ್ಟಮನೆ ವಿಶ್ವಾಸ ವ್ಯಕ್ತಪಡಿಸಿದರು

Share this on:
error: Content is protected !!