Latest Posts

ದ್ವೇಷ ಭಾಷಣಗಾರ್ತಿಯ ವಿರುದ್ಧ ಸುರತ್ಕಲ್ ಠಾಣೆ ಯಲ್ಲಿ ಜಾಮೀನು ರಹಿತ FIR ದಾಖಲು: ಪಾಪ್ಯುಲರ್ ಫ್ರಂಟ್ ಸ್ವಾಗತ
ಶೀಘ್ರದಲ್ಲಿ ಬಂಧಿಸುವಂತೆ ಆಗ್ರಹ

ಮಂಗಳೂರು,Oct,09 : ಸುರತ್ಕಲ್ ನಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಜನಜಾಗೃತಿ ಸಭೆ ನೆಪದಲ್ಲಿ ಕಾರ್ಯಕ್ರಮ ಆಯೋಜಿಸಿ ಇಸ್ಲಾಂ ನ್ನು ಮತ್ತು ಮುಸ್ಲಿಮ್ ಮಹಿಳೆಯರ ಬಗ್ಗೆ ಪ್ರಚೋದನಕಾರಿಯಾಗಿ ಭಾಷಣ ಮಾಡಿ ಹಿಂದೂ ಮುಸ್ಲಿಮರ ಮಧ್ಯೆ ಬಿನ್ನತೆ ಸೃಷ್ಟಿಸಿ ಸಮಾಜದ ಶಾಂತಿ ಕದಡಲು ಯತ್ನಿಸಿದ್ದ ಚೈತ್ರಾ ಕುಂದಾಪುರ ಎಂಬಾಕೆಯ ವಿರುದ್ಧ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತ ಖಾದರ್ ಎಂಬವರು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಆಕೆಯ ವಿರುದ್ಧ ಪೋಲಿಸರು ಜಾಮೀನು ರಹಿತ FIR ದಾಖಲಿಸಿದ ಕ್ರಮವನ್ನು ಪಾಪ್ಯುಲರ್ ಫ್ರಂಟ್ ಮಂಗಳೂರು ನಗರ ಅಧ್ಯಕ್ಷರಾದ ಖಾದರ್ ಕುಲಾಯಿ ಸ್ವಾಗತಿಸಿದ್ದಾರೆ ಹಾಗೂ ಶೀಘ್ರದಲ್ಲೇ ಆಕೆಯನ್ನು ಬಂಧಿಸುವಂತೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ಬಿಜೆಪಿ RSS ನಾಯಕರ ದ್ವೇಷ ಪೂರಿತ ಭಾಷಣಗಳಿಂದ ಪ್ರೇರಿತರಾಗಿ ಗುಂಪು ಹತ್ಯೆ, ಹಲ್ಲೆಗಳು,ವ್ಯಾಪಕವಾಗುತ್ತಿದ್ದು ಅದರ ಮುಂದುವರಿದ ಭಾಗವಾಗಿ ಜನಜಾಗೃತಿ ಸಭೆ ಎಂಬ ಹೆಸರಿನಲ್ಲಿ ಕರ್ನಾಟಕ ರಾಜ್ಯದಲ್ಲೂ ಅಂತಹ ಕಾರ್ಯಕ್ರಮ ಆಯೋಜಿಸಿ ಸಂಘಪರಿವಾರವು ಹಿಂದು ಹೆಣ್ಣು ಮಕ್ಕಳನ್ನು ದುರುಪಯೋಗ ಪಡಿಸಿಕೊಂಡು ಅವರ ಮೂಲಕ ಭಾಷಣ ಮಾಡಿಸಿ ಸಮಾಜದ ಸ್ವಾಸ್ಥ್ಯ ಕದಡಲು ಪ್ರಯತ್ನ ಪಡುತ್ತಿದ್ದಾರೆ‌.
ಪೋಲಿಸ್ ಇಲಾಖೆಯು ಇಂತಹ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸದೇ ಶಾಂತಿ ಕದಡದಂತೆ ಎಚ್ಚರ ವಹಿಸಬೇಕು ಹಾಗೂ ಚೈತ್ರಾ ಕುಂದಾಪುರ ಇವರ ವಿರುದ್ಧ ಪ್ರಕರಣ ದಾಖಲಿಸಿದರೆ ಸಾಲದು ಶೀಘ್ರದಲ್ಲೇ ಬಂಧಿಸಬೇಕು.ಹಾಗೂ ಈ ಸಭೆಯ ಆಯೋಜಕರ ವಿರುದ್ಧವೂ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಪಾಪ್ಯುಲರ್ ಫ್ರಂಟ್ ಮಂಗಳೂರು ನಗರದ ಅಧ್ಯಕ್ಷರಾದ ಖಾದರ್ ಕುಲಾಯಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Share this on:
error: Content is protected !!