Latest Posts

ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಉದಯೋನ್ಮುಖ ಪ್ರತಿಭೆಗಳಿಗೆ ಗೂಡಿನಬಳಿ ಕಾಂಗ್ರೆಸ್ ಘಟಕದ ವತಿಯಿಂದ ಸನ್ಮಾನ

ಬಂಟ್ವಳ : ಕಾಂಗ್ರೆಸ್ ಘಟಕ ಗೂಡಿನಬಳಿ ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಟೇಕ್ವೋಂಡೋ ಸ್ಪರ್ಧೆಯಲ್ಲಿ ರಾಜ್ಯದಲ್ಲೇ ಚಿನ್ನ ಗಳಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮೊಹಮ್ಮದ್ ಅಯಾನ್ ಮತ್ತು ಮಿಸ್ಟರ್ ದಕ್ಷಿಣ ಕನ್ನಡ ಪ್ರಶಸ್ತಿ ಬಾಚಿದ ವಿಲಾಯತ್ ರಾಫಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ಕೊಟ್ಟು ಸನ್ಮಾನಿಸಲಾಯಿತು.

ಅದೇ ರೀತಿ ವೇದಿಕೆಯಲ್ಲಿ ಆಸೀನರಾಗಿದ್ದ ಅನಿವಾಸಿ ಉದ್ಯಮಿಯಾದ ಜಾವಿದ್,ಹಿದಾಯತುಲ್ಲ ಜೆಕೆ,ಅಲ್ತಾಫ್ ಜಿಕೆ,ಝಮೀರ್ ಇವರಿಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತ ಭಾಷಣವನ್ನು ಮುಸ್ತ ಡ್ರೀಮ್ಸ್ ನಡೆಸಿಕೊಟ್ಟರು.ಅನಿವಾಸಿ ಭಾರತೀಯರು ತಂತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಅನಿವಾಸಿ ಉದ್ಯಮಿ ,ಸ್ಥಳೀಯ ಕಾಂಗ್ರೆಸ್ ಮುಖಂಡ ಪರ್ವೇಝ್ ಜಿಕೆ ಧನ್ಯವಾದ ಸಮರ್ಪಣೆಗೈದರು.

ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ರಝಾಕ್ ಟಿ,ಗೌರವಾಧ್ಯಕ್ಷ ಚಾಚಾ ಖಾದರ್,ಇಸ್ಮಾಯಿಲ್,ಮನ್ಸೂರ್ ಜಿಕೆ, ಸಾದಿಕ್(ಮೋನು ಎಂಕೆ ರೋಡ್) ,ಕರೀಂ,ರಹೀಂ ಕೈಕುಂಜೆ,ಅಮೀನ್ ,ರಿಝ್ವಾನ್,ಹಸನ್, ರಿಲ್ವಾನ್,ಕಾಸಿಂ,ಶಂಶೀರ್ ಜೆಕೆ,ಮುನ್ನ,ಆರಿಫ್ ಜಿಕೆ ಹಾಗೂ ಇತರ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Share this on:
error: Content is protected !!