ಬಂಟ್ವಾಳ : ಮಿತ್ತಬೈಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೆನೇಜ್ಮೆಂಟ್ ನಡೆಸಿದ ಮುಸಬಕ 2k21 ಮಾರ್ಹೂಂ ಮುತ್ತಲಿಬ್ ತಂಗಳ್ ರವರ ಖಬರ್ ಝಿಯಾರತ್ ಗೆ ಶಾಫಿ ಫೈಝಿ ಅಲ್ ಇರ್ಫಾನಿ ಉಸ್ತಾದರ ನೇತೃತ್ವದಲ್ಲಿ ಕಾರ್ಯಕ್ರಮ ಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಧ್ವಜಾರೋಹಣಕ್ಕೆ ಮಸೀದಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಸಾಹೇಬ್ ರವರು ನೇತೃತ್ವ ನೀಡಿದರು.


ಮುಸಾಬಕ 2k21ರ ಉದ್ಘಾಟನೆ ಕಾರ್ಯಕ್ರಮ ವು ಗೂಡಿನಬಳಿ ಸದರ್ ಉಸ್ತಾದರಾದ ಬಶೀರ್ ಅಝ್ ಹರಿ ನೆರೆವೇರಿಸಿ ಕಾರ್ಯಕ್ರಮದಲ್ಲಿ SKIMVB BOARD ಮುಫತ್ತಿಶರಾದ ರಶೀದ್ ಮುಸ್ಲಿಯಾರ್ ದುಃಅಕ್ಕೆ ನೇತೃತ್ವ ನೀಡಿದರು ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆ ಹನೀಫ್ ಮುಸ್ಲಿಯಾರ್ ವಹಿಸಿದ್ದರು.

ತದನಂತರ ಮಕ್ಕಳ ಇಸ್ಲಾಮಿಕ್ ಕಲಾ ಸಾಹಿತ್ಯ ಕಾರ್ಯಕ್ರಮಕ್ಕೆ ಮುಸಾಬಕ 2k21ಇದರ ಕ್ಯಾಪ್ಟನ್ ತ್ವಯ್ಯಿಬ್ ಫೈಝಿ ರವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಬೆಳ್ಳಿಗೆ 7:00 ಪ್ರಾರಂಭವಾದಂತಹ ಕಾರ್ಯಕ್ರಮ ರಾತ್ರಿ 8 ಗಂಟೆಯ ವರೆಗೆ ನಡೆಯಿತು. ರಾತ್ರಿ 8:30 ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮವು ನಡೆಯಿತು, ರಫೀಕ್ ಮುಸ್ಲಿಯಾರ್ ಸ್ವಾಗತಿಸಿ, ಶಾಫಿ ಫೈಝಿ ಅಲ್ ಇರ್ಫಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಹಾಜಿ ಯೂಸುಫ್ ಬದ್ರಿಯಾ ವಹಿಸಿದರು. ಕಾರ್ಯಕ್ರಮದಲ್ಲಿ ಮುಜ್ಜವಿದ್ ಉಸ್ತಾದ್ ಹಾಗೂ ಮುಫಾತ್ತಿಶ್ ಉಸ್ತಾದ್ ಆಶಂಸ ಭಾಷಣವನ್ನುಮಾಡಿದರು. ಸಾಗರ್ ಮುಹಮ್ಮದ್, ಇಕ್ಬಲ್, ಅಬ್ದುಲ್ ಹಮೀದ್ ಅಬೂ ಉವೈಸ್, ಇಲ್ಯಾಸ್ ಅರ್ಶದಿ,ಉಬೈದುಲ್ಲಾ ಹಾಜಿ ಗೂಡಿನಬಳಿ, ಮನ್ಸೂರ್ ಗೂಡಿನಬಳಿ, ಮಜೀದ್ ಮುಸ್ಲಿಯಾರ್ ಮುಸ್ತಫ ಫೈಝಿ,ಸಿದ್ದೀಕ್ ದಾರಿಮಿ ಉಪಸ್ಥಿತರಿದ್ದರು ತದಾನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಆವೇಶ ಬರಿತಾ ಬುರ್ದಾ ಕಾರ್ಯಕ್ರಮದಲ್ಲಿ ಪ್ರಥಮ ಗೂಡಿನಬಳಿ ಮದ್ರಸ ಹಾಗೂ ದ್ವಿತೀಯ ಪರ್ಲಿಯ ಮದ್ರಸ, ಮುಸಾಬಕ 2k21 ಇದರ ಚಾಂಪಿಯನ್ ಆಗಿ ಪರ್ಲಿಯ ಮದ್ರಸವು ರನ್ನರ್ಸ್ ಮಿತ್ತಬೈಲ್ ಮದ್ರಸ ಮದ್ರಸ ಪಾಲಾಯಿತು. ಕಾರ್ಯಕ್ರಮದಲ್ಲಿ ತ್ವಯ್ಯಿಬ್ ಫೈಝಿ ನಿರೂಪಿಸಿ ವಂದಿಸಿದರು.


