ಮಾಡನ್ನೂರು:’ಸಮಸ್ತ’ ಮದ್ರಸ ಮುಅಲ್ಲಿಂ ಒಕ್ಕೂಟದ ಆಶ್ರಯದಲ್ಲಿ ಮಾಡಾವು ಮದ್ರಸ ವಠಾರದಲ್ಲಿ ನಡೆದ ಕುಂಬ್ರ ರೇಂಜ್ ಮಟ್ಟದ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧಾಕೂಟ ಮುಸಾಬಖ2021 ದಲ್ಲಿ ಮಾಡನ್ನೂರು ನೂರುಲ್ ಇಸ್ಲಾಂ ಸೆಕೆಂಡರಿ ಮದ್ರಸವು ‘ಮುಸಾಬಖ 2k21 ಚಾಂಪಿಯನ್ ಟ್ರೋಫಿ ಯನ್ನು ಪಡೆಯಿತು. ರೇಂಜ್ ಮಟ್ಟದ 35 ಮದ್ರಸಗಳಿಂದ ನಾಲ್ಕು ಡಿವಿಷನ್ ಗಳಲ್ಲಾಗಿ ನಾಲ್ಕು ನೂರರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ಪರ್ಧಾಕೂಟದಲ್ಲಿ ಅತ್ಯಧಿಕ ಅಂಕ ಪಡೆದು ಮಾಡನ್ನೂರು ಮದ್ರಸ ವಿದ್ಯಾರ್ಥಿಗಳು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ನಾಲ್ಕು ಡಿವಿಝನ್ ಗಳಲ್ಲಿ ಸಬ್ ಜೂನಿಯರ್,ಜೂನಿಯರ್, ಸೂಪರ್ ಸೀನಿಯರ್ ವಿಭಾಗದ ಡಿವಿಷನ್ ಚಾಂಪಿಯನ್ ಪ್ರಶಸ್ತಿಯು ಮಾಡನ್ನೂರು ಮದ್ರಸ ವಿದ್ಯಾರ್ಥಿಗಳ ಪಾಲಾಯಿತು.

ವೈಯುಕ್ತಿಕವಾಗಿ ಅತ್ಯಧಿಕ ಅಂಕ ಪಡೆದ ಜೂನಿಯರ್ ವಿಭಾಗದ ಜುನೈದ್ ಹಾಗೂ ಸೂಪರ್ ಸೀನಿಯರ್ ವಿಭಾಗದ ಅನಸ್ ಕಲಾಪ್ರತಿಭೆ ಗಳಾಗಿ ಹೊರಹೊಮ್ಮಿದರು.ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ ಕ್ಕೆ ಮಾಡನ್ನೂರು ಖತೀಬರೂ ಮದ್ರಸಾ ಅಧ್ಯಾಪಕರೂ ಆದ ಸಿರಾಜುದ್ದೀನ್ ಫೈಝಿ ,ಪ್ರಭಾರ ಮುಖ್ಯೋಪಾಧ್ಯಾಯರಾದ ಇಮ್ರಾನ್ ದಾರಿಮಿ
ವಲ್ ಹೈತಮಿ, ಅಧ್ಯಾಪಕರಾದ ಇಬ್ರಾಹೀಂ ಝುಹ್ರಿ, ಇಬ್ರಾಹೀಂ ಸಅದಿ, ಅಬೂಬಕರ್ ಮುಸ್ಲಿಯಾರ್ ಸೂಕ್ತ ತರಬೇತಿಯನ್ನು ನೀಡಿದ್ದಾರೆಂದು ಜಮಾಅತ್ ಅಧ್ಯಕ್ಷರಾದ ಕೆ.ಕೆ.ಇಬ್ರಾಹೀಂ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್ ತಿಳಿಸಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.