ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಕುಂಬ್ರ ರೇಂಜ್ ಇದರ ವತಿಯಿಂದ ಮಾಡಾವು ಮದ್ರಸಾ ದಲ್ಲಿ ನಡೆದ ” ಮುಸಾಬಖ 2021 ಮದ್ರಸ ಮಕ್ಕಳ ಕಲಾ ಸಾಹಿತ್ಯ ಸ್ಫರ್ದೆ ” ಯಲ್ಲಿ ರನ್ನರ್ಸ್ ಪಡೆದ ಕಟ್ಟತ್ತಾರು ನುಸ್ರತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಮುಸಾಬಖ 2021 ರಲ್ಲಿ ಮೂರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಅಯ್ಕೆಯಾಗಿದ್ದು 6 ಮಂದಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಭಾ ಅಧ್ಯಕ್ಷತೆಯನ್ನು ಜಮಾಹತ್ ಅದ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ವಹಿಸಿದರು.ಖತೀಬ್ ಉಸ್ತಾದ್ ಮತ್ತು ಸದರ್ ಉಸ್ತಾದ್,ಅಧ್ಯಕ್ಷರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಮಾತುಗಳನ್ನಾಡಿ ಶುಭವನ್ನು ಹಾರೈಸಿದರು.

ಖತೀಬರಾದ ಇಸ್ಹಾಕ್ ಬಾಹಸನಿ, ಸದರ್ ಉಸ್ತಾದರಾದ ಸಿದ್ದೀಕ್ ಫ್ಯೆಝಿ, ಮುಅಲ್ಲಿಂ ಮುಹ್ಯುದ್ದೀನ್ ಮುಸ್ಲಿಯಾರ್ , ಜಮಾಹತ್ ಕಾರ್ಯದರ್ಶಿ ಸಿ ಬಿ ಅಬೂಬಕ್ಕರ್, ಪದಾದಿಕಾರಿಗಳಾದ ಯೂಸುಫ್ ಹಾಜಿ ,ಉಮ್ಮರ್ ಹಾಜಿ, ಯೂಸುಫ್ ಅಂಗಡಿ, ಪುತ್ತು ಹಾಜಿ,ಅಬೂಬಕ್ಕರ್ ನಿಡ್ಯಾಣ, ಹನೀಫ್ ಬದ್ರಿಯಾ, ಕೆ.ಎಂ ಶರೀಫ್,ಅಬ್ಬು ಕೆ ಯಂ, ಬಶೀರ್ ನಂಜೆ ಮೊದಲಾದವರು ಉಪಸ್ತಿತರಿದ್ದರು.