Latest Posts

ಕುಂಬ್ರ ರೇಂಜ್ ಮುಸಾಬಖ-2021 ಚಾಂಪಿಯನ್ ವಿಜೇತ ಮಾಡನ್ನೂರು ಮದ್ರಸ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

▪️ಪ್ರತಿಭೆಗಳ ಬೆಳವಣಿಗೆಗೆ ಅಭಿನಂದನಾ ಕಾರ್ಯಕ್ರಮಗಳು ಪೂರಕ -ಬಹು ಬುರ್ಹಾನ್ ತಂಙಳ್

▪️ಅರಳಿದ ಪ್ರತಿಭೆಗಳು ಸಮಾಜಕ್ಕೆ ಬೆಳಕು ನೀಡುವಂತಾಗಲಿ-ಕೆ.ಕೆ.ಇಬ್ರಾಹೀಂ ಹಾಜಿ

▪️ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಅವರನ್ನು ಸಾಧಕರನ್ನಾಗಿಸುವ ಮದ್ರಸ ಅಧ್ಯಾಪಕರ ಶ್ರಮ ಅಭಿನಂದನೀಯ-ಬುಶ್ರಾ ಅಬ್ದುಲ್ ಅಝೀಝ್

ಮಾಡನ್ನೂರು: ‘ಸಮಸ್ತ’ ಮದ್ರಸ ಮುಅಲ್ಲಿಂ ಒಕ್ಕೂಟವು ಆಯೋಜಿಸಿದ ಮುಸಾಬಖ ಕಾರ್ಯಕ್ರಮಗಳ ಮುಖಾಂತರ ಹೊರಬರುವ ನವ ಪ್ರತಿಭೆಗಳನ್ನು ಪೋಷಿಸ ಬೇಕಾಗಿದ್ದು ನಮ್ಮ ಕರ್ತವ್ಯವಾಗಿದ್ದು,ಪ್ರತಿಭೆಗಳ ಬೆಳವಣಿಗೆಗೆ ಇಂತಹಾ ಅಭಿನಂದನಾ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ನೂರುಲ್ ಹುದಾ ಅಕಾಡೆಮಿ ಉಪ ಪ್ರಾಂಶುಪಾಲರಾದ ಬಹು ಸಯ್ಯಿದ್ ಬುರ್ಹಾನ್ ತಂಙಳ್ ನುಡಿದರು.ಅವರು ಕುಂಬ್ರ ರೇಂಜ್ ಮಟ್ಟದ ಮದ್ರಸ ವಿದ್ಯಾರ್ಥಿಗಳ ಸಾಹಿತ್ಯ ಸ್ಪರ್ಧಾ ಕೂಟದಲ್ಲಿ ದಾಖಲೆಯ ಸಾಧನೆಯನ್ನು ಮಾಡಿದ ಮಾಡನ್ನೂರು ಮದ್ರಸ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಮಾಡನ್ನೂರು ಜಮಾಅತ್ ಕಮಿಟಿ ಮತ್ತು ಖುವ್ವತುಲ್ ಇಸ್ಲಾಂ ಯಂಗ್ ಮೆನ್ಸ್ ಎಸೋಸಿಯೇಶನ್ ಆಶ್ರಯದಲ್ಲಿ
ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಕೆ.ಇಬ್ರಾಹೀಂ ಹಾಜಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯಿಂದ ನಾವು ಹೆಮ್ಮೆ ಪಡುವಂತಾಗಿದ್ದು ನಮ್ಮ ಮದ್ರಸದಿಂದ ಅರಳಿದ ಪ್ರತಿಭೆಗಳು ಇನ್ನೂ ಬೆಳಗಿ ಸಮಾಜಕ್ಕೆ ಬೆಳಕು ನೀಡುವಂತಾಗಲಿ ಎಂದು ಹೇಳಿ ಅಧ್ಯಾಪಕ ಹಾಗೂ ವಿದ್ಯಾರ್ಥಿ ತಂಡವನ್ನು ಅಭಿನಂದಿಸಿದರು. ಅಭಿನಂದನಾ ಭಾಷಣ ಜಮಾಅತ್ ಕಮಿಟಿ ಪ್ರಮುಖರೂ ಪ್ರತಿಷ್ಠಿತ ನೂರುಲ್ ಹುದಾ ಅಕಾಡೆಮಿ ಅಧ್ಯಕ್ಷರೂ ಆದ ಬುಶ್ರಾ ಅಬ್ದುಲ್ ಅಝೀಝ್ ರವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ವೇದಿಕೆಯನ್ನು ಕಲ್ಪಿಸಿ ಅವರನ್ನು ಸಾಧಕರನ್ನಾಗಿ ಮಾಡುವ ಮದ್ರಸ ಮುಅಲ್ಲಿಮರ ಶ್ರಮ ಅಭಿನಂದನೀಯವಾಗಿದೆ ಎಂದರು.
ಮಖಾಂ ಝಿಯಾರತ್ ನೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬರಾದ ಸಿರಾಜುದ್ದೀನ್ ಫೈಝಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ಜಮಾಅತ್ ಸಮಿತಿ ಪರವಾಗಿ ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್,ಪೋಷಕರ ಪರವಾಗಿ ಸಿ.ಕೆ.ದಾರಿಮಿ,ಮಹ್ಮೂದ್ ಮುಸ್ಲಿಯಾರ್ ಮಾತನಾಡಿ ಅಭಿನಂದನೆಗಳನ್ನು ಸಲ್ಲಿಸಿದರು.

ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ವತಿಯಿಂದ ಕ್ಯಾಶ್ ಅವಾರ್ಡ್: ವಿಜೇತ ವಿದ್ಯಾರ್ಥಿಗಳಿಗೆ ಕಲ್ಚರಲ್ ಸಮಿತಿ ಅಧ್ಯಕ್ಷರೂ ಜಮಾಅತ್ ಕಮಿಟಿ ಉಪಾಧ್ಯಕ್ಷರೂ ಆದ ಬಿ.ಎಂ.ಅಬ್ದುಲ್ಲಾ ಚಾಲ್ಕೆರೆ ಹಾಗೂ ಪದಾಧಿಕಾರಿಗಳು ನಗದು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಅಧ್ಯಾಪಕರಿಗೆ ಕ್ಯಾಶ್ ಅವಾರ್ಡ್: ವಿದ್ಯಾರ್ಥಿಗಳ ಸಾಧನೆಗೆ ಸೂಕ್ತ ಮಾರ್ಗದರ್ಶನಗಳನ್ನು ನೀಡಿದ ಮದ್ರಸ ಅಧ್ಯಾಪಕರಿಗೆ
ಜಮಾಅತ್ ಕಮಿಟಿ ಅಧ್ಯಕ್ಷರಾದ ಕೆ.ಕೆ.ಇಬ್ರಾಹೀಂ ಹಾಜಿ ಉಪಾಧ್ಯಕ್ಷರಾದ ಸಿ‌.ಹೆಚ್.ಅಬ್ದುಲ್ ಅಝೀಝ್,ಸಲಾಹುದ್ದೀನ್ ಸಖಾಫಿ ಪ್ರಾಯೋಜಕತ್ವದಲ್ಲಿ ನಗದು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯಂಗ್ ಮೆನ್ಸ್ ನಿಂದ ಡಿವಿಷನ್ ಚಾಂಪಿಯನ್ ಅಭಿನಂದನಾ ಫಲಕ: ಸ್ಪರ್ಧಾ ಕೂಟದಲ್ಲಿ ಮೂರು ವಿಭಾಗೀಯ ಚಾಂಪಿಯನ್ ಪ್ರಶಸ್ತಿ ಪಡೆದದ್ದನ್ನು ಪ್ರತ್ಯೇಕ ಅಭಿನಂದಿಸಿದ ಸ್ಥಳೀಯ ಖುವ್ವತುಲ್ ಇಸ್ಲಾಂ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷರಾದ ಹಿರಾ ಶಾಫಿ ಹಾಗೂ ಪದಾಧಿಕಾರಿಗಳು ಅಭಿನಂದನಾ ಫಲಕ ನೀಡಿ ಸನ್ಮಾನಿಸಿದರು.
SKSSFನಿಂದ ಸನ್ಮಾನ: ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಜಿ.ಯೂಸುಫ್ ಹಾಗೂ ಪದಾಧಿಕಾರಿಗಳು ಸಮಿತಿಯ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಕಲಾಪ್ರತಿಭೆಗಳಿಗೆ ವಿಶೇಷ ಕ್ಯಾಶ್ ಅವಾರ್ಡ್: ವೈಯಕ್ತಿಕ ಅತ್ಯಧಿಕ ಅಂಕಗಳಸಿ ಕಲಾ ಪ್ರತಿಭೆ ಗಳಾಗಿ ಹೊರಹೊಮ್ಮಿದ ಅನಸ್ ಮತ್ತು ಜುನೈದ್ ಎಂಬಿಬ್ಬರು ವಿದ್ಯಾರ್ಥಿಗಳಿಗೆ ಅರೆಯಲಾಡಿ ಈಗಲ್ ಸ್ಟಾರ್
ವತಿಯಿಂದ ಸಾರಥಿ ಗಳಾದ ಬಶೀರ್ ಸಿ.ಹೆಚ್.,ಅಝ್ಹರ್ ಹಾಗೂ ಸ್ಥಳೀಯ ಪಂಚಾಯತ್ ಸದಸ್ಯರಾದ ಅಬ್ದುರ್ರಹ್ಮಾನ್ ಬಿ.ಕೆ.ಮತ್ತು ನಿವ್ರತ್ತ ಎ ಎಸ್ ಐ ಹಸೈನಾರ್ ಎಂ.ಡಿ.ತಮ್ಮ ವೈಯುಕ್ತಿಕ ನಗದು ಸ್ಮರಣಿಕೆಯನ್ನು ನೀಡಿದರು.

ಸಮಾರಂಭದಲ್ಲಿ ಮಸೀದಿ ಕೋಶಾಧಿಕಾರಿ ಯೂಸುಫ್ ಹಾಜಿ ಅರೆಯಲಾಡಿ, ಹಿರಿಯರಾದ ಇಸ್ಮಾಯಿಲ್ ಹಾಜಿ ಹಿರಾ, ಮದ್ರಸ ಉಸ್ತುವಾರಿ ಸದಸ್ಯರಾದ ಮೊಯ್ದು ಎಂ.ಡಿ., ಮಸೀದಿ ಉಸ್ತುವಾರಿ ಸದಸ್ಯರಾದ ಖಾಲಿದ್ ಬಿ.ಎಂ.,ಹಸನ್ ಬಾಖವಿ, ಅಬ್ದುಲ್ ಅಝೀಝ್ ಮುಸ್ಲಿಯಾರ್ ,ಮದ್ರಸ ಅಧ್ಯಾಪಕರಾದ ಇಬ್ರಾಹೀಂ ಝುಹ್ರಿ, ಇಬ್ರಾಹೀಂ ಸಅದಿ, ಅಬೂಬಕರ್ ಮುಸ್ಲಿಯಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಮದ್ರಸದ ಪ್ರಭಾರ ಮುಖ್ಯೋಪಾಧ್ಯಾಯರಾದ ಇಮ್ರಾನ್ ದಾರಿಮಿ ವಲ್ ಹೈತಮಿ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಿದರು.

Share this on:
error: Content is protected !!