Latest Posts

ಸಮಾಜದ ಸುಸ್ಥಿತಿಗೆ ವಿದ್ಯಾರ್ಥಿಗಳಿಗೆ ಉತ್ತಮ ಪರಿಸರವೂ ಅತ್ಯಗತ್ಯ; ಮೌಲಾನಾ ಅಝೀಝ್ ದಾರಿಮಿ ಉಸ್ತಾದ್

ಸುರತ್ಕಲ್ ರೇಂಜ್ ಮುಸಾಬಖಾ 2k21-22 ಚಾಂಪಿಯನ್ ಶಿಪ್ ಪಡೆದ ಚೊಕ್ಕಬೆಟ್ಟು ಅಲ್ ಮದರಸತುಲ್ ಅಝೀಝಿಯ್ಯ

ಸುರತ್ಕಲ್; ಜನವರಿ 02.

ಸುರತ್ಕಲ್ ರೇಂಜ್ ಮದರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಸಾಹಿತ್ಯ ಸ್ಪರ್ಧೆ ಮುಸಾಬಖಾ-2k21-22 ಸಮಾರಂಭವು ದಿನಾಂಕ ಜನವರಿ 02 ಆದಿತ್ಯ ವಾರ ಬಹಳ ಅದ್ದೂರಿಯಾಗಿ ಚೊಕ್ಕಬೆಟ್ಟು ಮಸೀದಿಯ ಶಂಸುಲ್ ಉಲಮಾ ವೇದಿಕೆ ಮತ್ತು ಜಾಮಿಯಾ ವಿದ್ಯಾ ಸಂಸ್ಥೆ ಯ ವಠಾರದಲ್ಲಿ ಮರ್ಹೂಮ್ ಮರ್ಹೂಮ್ ಕೋಟ ಉಸ್ತಾದ್ ವೇದಿಕೆ,ಮರ್ಹೂಮ್ ಅಬೂಬಕರ್ ಹಾಜಿ ವೇದಿಕೆ ಗಳಲ್ಲಿ ಕಾರ್ಯಕ್ರಮಳು ನಡೆಯಿತು.

ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಎಸ್ ವೈ ಎಸ್ ಸಂಚಾಲಕರಾದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ ,ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ ಪೂರ್ಣ ಪರಿಸರ ಸಿಗದೇ ಇರುವುದು ದೊಡ್ಡ ಸಮಸ್ಯೆ ಯಾಗಿರುತ್ತದೆ.ವಿದ್ಯಾರ್ಥಿ ಯು ನೆರೆ ಮತ್ತು ಸುತ್ತಲಿನ ವಾತಾವರಣವನ್ನು ಹೊಂದಿ ಬೆಳೆಯುತ್ತಿರುತ್ತದೆ. ಪರಿಸರದಲ್ಲಿ ಅನಾಗರಿಕ ವರ್ತನೆ ಮತ್ತು ಅಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಿ ಕಂಡು ಬರುವಾಗ ಮಕ್ಕಳಲ್ಲಿ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಉತ್ತಮ ಪರಿಸರದ ಸೃಷ್ಟಿ ಯು ಸಮಾಜದ ಎಲ್ಲರ ಜವಾಬ್ದಾರಿ ಎಂದು ಉದಾಹರಣೆ ಸಹಿತ ವಿವರಿಸಿದರು.ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ರೇಂಜ್ ಮೇನೇಜ್ಮೆಂಟ್ ಅಧ್ಯಕ್ಷ ರಾದ ಏ ಕೆ ಅಬ್ದುಲ್ ಖಾದರ್ ಜೀಲಾನಿ ಯವರು ವಹಿಸಿದರು.
ಬೆಳಗ್ಗೆ ನಡೆದ ಸಾಂಸ್ಕೃತಿಕ ಕಲಾ ಸ್ಪರ್ಧೆ ಯ ಕಾರ್ಯಕ್ರಮ ವು ಚೊಕ್ಕಬೆಟ್ಟು ಮಸೀದಿ ಅಧ್ಯಕ್ಷ ರಾದ ಬಹು ಟಿ ಮುಹಮ್ಮದ್ ಬಶೀರ್ ರವರು ಧ್ವಜಾರೋಹಣದೊಂದಿಗೆ ಆರಂಭಗೊಂಡಿತು.

ಮುನ್ನೂರು ವಿದ್ಯಾರ್ಥಿಗಳು ಭಾಗವಹಿಸಿದ ಕಾರ್ಯಕ್ರಮ ದಲ್ಲಿ ಕಿಡ್ಸ್,ಸಬ್ ಜೂನಿಯರ್, ಜೂನಿಯರ್ ,ಸೀನಿಯರ್ ,ಸೂಪರ್ ಸೀನಿಯರ್ ಹೀಗೆ ನಾಲ್ಕು ಹಂತದಲ್ಲಿ ಸ್ಪರ್ಧೆ ನಡೆಯಿತು.ಕೊನೆಯಲ್ಲಿ ಅಲ್ ಮದರಸತುಲ್ ಅಝೀಝೀಯಾ ಚೊಕ್ಕಬೆಟ್ಟು ಮದಸರವು ಚಾಂಪಿಯನ್ ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡಿತು.ಇಡ್ಯ ಮದರಸವು ರನ್ನರ್ ಅಪ್ ಸ್ಥಾನವನ್ನು ಪಡೆದು ಕೊಂಡಿತು.


ಕಾರ್ಯಕ್ರಮ ದಲ್ಲಿ ಶರೀಫ್ ಹೈತಮಿ ,ಹನೀಫ್ ಮುಸ್ಲಿಯಾರ್ ಮುಫತ್ತಿಸ್,ಅಬೂಬಕರ್ ಮದನಿ, ಶಿರಾಜುದ್ದೀನ್ ಫೈಝಿ,ದಾವೂದ್ ಹನೀಫೀ ,ನಾಸಿರ್ ಮುಸ್ಲಿಯಾರ್,ಬೆಳ್ಳೂರು, ಜಲೀಲ್ ಫೈಝಿ ಇಡ್ಯ.ಅಬ್ದುಲ್ಲಾ ದಾರಿಮಿ ಮುಲ್ಕಿ,ಮುಸ್ತಫಾ ಅಝ್ಹರಿ ,
ಆಸಿಫ್ ಯಮಾನಿ ಚೊಕ್ಕಬೆಟ್ಟು, ಇಮ್ರಾನ್ ದಾರಿಮಿ ಕೊಲ್ನಾಡು,ಶಿಹಾಬುದ್ದೀನ್ ಪ್ರ,ಕಾರ್ಯದರ್ಶಿ ಚೊಕ್ಕಬೆಟ್ಟು ಮಸೀದಿ, ಆಸಿಫ್ ಚೊಕ್ಕಬೆಟ್ಟು, ಅಝೀಝ್ ಚೊಕ್ಕಬೆಟ್ಟು, ನೂರು ಮುಹಮ್ಮದ್ ಚೊಕ್ಕಬೆಟ್ಟು ಮುಹಮ್ಮದ್,ಅಧ್ಯಕ್ಷರು ಎಸ್ ವೈ ಎಸ್,
ಅಬ್ಬಾಸ್ nmpt , ಬಶೀರ್ ಚೊಕ್ಕಬೆಟ್ಟು , ಅಝರುದ್ದೀನ್,ಚೊಕ್ಕಬೆಟ್ಟು,ಚೆರಿಯೊನಾಕ ಚೊಕ್ಕಬೆಟ್ಟು,ಶೌಕತ್ ಚೊಕ್ಕಬೆಟ್ಟು,ಸಯ್ಯಿದ್ ಇಬ್ರಾಹಿಂ ಚೊಕ್ಕಬೆಟ್ಟು, ಹಸನ್ ಶಾಮಿಯಾನ,
ಮುಬೀನ್ ಕೊಳ್ನಾಡು, ಹನೀಫ್ ಇಡ್ಯ,ಇಬ್ರಾಹೀಮ್ ಬೊಳ್ಳೂರು, ಮುಹಮ್ಮದ್ ಹಳೆಯಂಗಡಿ, ಇಮ್ತಿಯಾಝ್ ಇಡ್ಯ,ಅಬೂಬಕರ್ ಇಡ್ಯ,ಇಲ್ಯಾಸ್ ಇಡ್ಯ,ಸುಲೈಮಾನ್ ಬೊಳ್ಳೂರು, ರಫೀಕ್ ಚೊಕ್ಕಬೆಟ್ಟುಝಫರುಲ್ಲಾ ಕೃಷ್ಣಾಪುರ,ಕಮಾಲ್ ಚೊಕ್ಕಬೆಟ್ಟು,ಝೈನುದ್ದೀನ್ ಚೊಕ್ಕಬೆಟ್ಟು ಇಮ್ರಾನ್ ಚೊಕ್ಕಬೆಟ್ಟು,ಇಲ್ಯಾಸ್ ಸೂರಿಂಜೆ,ಝೈನು ಬೊಲ್ಲೂರು ,ಹಮೀದ್ ಸೂರಿಂಜೆ,ಹಮೀದ್ ಹಾಜಿ ಚೊಕ್ಕಬೆಟ್ಟು,ಅಬ್ಬಾಸ್ ಮುಸ್ಲಿಯಾರ್ ಕೃಷ್ಣಾಪುರ, ಹನೀಫ್ ಕೃಷ್ಣಾಪುರ,ಮುಹಮ್ಮದ್ ಅಲಿ ತೋಟ ,ಸುರತ್ಕಲ್ ರೇಂಜ್ ಖತೀಬರು ಮತ್ತು ಮುಅಲ್ಲಿಮ್ ಉಸ್ತಾದರು ಹಾಗೂ ಮೇನೇಜ್ಮೆಂಟ್ ಪದಾಧಿಕಾರಿಗಳು,ತೀರ್ಪುಗಾರರು ,ಚೊಕ್ಕಬೆಟ್ಟು ಜಮಾತರು, ಸ್ವಯಂ ಸೇವಕರು ಭಾಗವಹಿಸಿದ್ದರು. . ರೇಂಜ್ ಅಧ್ಯಕ್ಷ ರಾದ ಅಬ್ದುಲ್ ರಜಾಕ್ ಅಝ್ಹರಿ ಸ್ವಾಗತಿಸಿದರು.ಚೊಕ್ಕಬೆಟ್ಟು ಜಮಾತ್ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮ ದ ಕೊನೆಯಲ್ಲಿ ಅಗಲಿದ ಸಮಸ್ತ ನಾಯಕರಿಗೆ ತಹ್ಲೀಲ್ ಮತ್ತು ಪ್ರತ್ಯೇಕ ಪ್ರಾರ್ಥನೆ ನಡೆಯಿತು

Share this on:
error: Content is protected !!