Latest Posts

ಕೊರಗಜ್ಜನ ಅವಮಾನ ಪ್ರಕರಣದ ಹಿನ್ನೆಲೆ:
ಬಿಜೆಪಿ ನಾಯಕರ ವಿರುದ್ಧ ಆಕ್ರೋಶಗೊಂಡ ಫಝಲ್ ಅಸೈಗೋಳಿ
ಯಾವುದೇ ನೈಜ ಅಪರಾಧಿಯನ್ನು ಬಂಧಿಸದೆ ಅಸ್ಗರ್ ಮುಡಿಪು ಅವರನ್ನು ಏಕಾಏಕಿ ಅಮಾನತು ಮಾಡಿದ ಬಿಜೆಪಿ ಪಕ್ಷದ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ.

ವಿಟ್ಲ: ಕೊರಗಜ್ಜನ ಅವಮಾನ ಪ್ರಕರಣದಲ್ಲಿ ಪೋಲಿಸರು ನೈಜ ಅಪರಾಧಿಗಳನ್ನು ಬಂಧಿಸದೆ ಆರೋಪಿಯ ನಿರಪರಾಧಿ ಅಮಾಯಕ ಸಹೋದರನನ್ನು ಬಂಧಿಸಿದ ಬಗ್ಗೆ ಮಾಹಿತಿ ಲಭ್ಯವಾಗಿ, ನಿರಪರಾಧಿ ಸಹೋದರ ‌ಅನ್ಯಾಯವಾಗಿ ಬಂಧನಕ್ಕೊಳಗಾಗಿದ್ದಾನೆ ಎಂದು ಮನಗಂಡು ಬಿಜೆಪಿ ಅಲ್ಪಸಂಖ್ಯಾತ ಯುವ ಮೋರ್ಚಾ ನಾಯಕ ಅಸ್ಗರ್ ಮುಡಿಪು ಅವರು ಆ ಸಹೋದರನ ಬೆನ್ನಿಗೆ ನಿಂತು ಠಾಣೆಯಿಂದ ಬಿಡುಗಡೆಗೊಳಿಸಿದ್ದರು.
ಈ ಬಗ್ಗೆ ಬಿಜೆಪಿ ಪಾಳಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ನಂತರದ ದಿನದಲ್ಲಿ ದಿನಾಂಕ 11-01-2022 ರಂದು ಅಸ್ಗರ್ ಮುಡಿಪು ಅವರನ್ನು ಪಕ್ಷದ ಸ್ಥಾನದಿಂದ ಅಮಾನತು ಮಾಡಲಾಗಿತ್ತು.
ಈ‌ ಬಗ್ಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮತ್ತೋರ್ವ ನಾಯಕ ಫಝಲ್ ಅಸೈಗೋಳಿ ಅವರು ಸಾಮಾಜಿಕ ಜಾಲತಾಣದಲ್ಲಿ ನಾಯಕರ ನಡೆಯನ್ನು ವಿರೋಧಿಸಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ‌ನೈಜ ಆರೋಪಿಯನ್ನು ಬಂಧಿಸದೆ ಆರೋಪಿಯ ನಿರಪರಾಧಿ ಸಹೋದರನನ್ನು ಬಂಧಿಸಿದಾಗ ಮಾನವೀಯ ನೆಲೆಯಲ್ಲಿ ಹಾಗೂ ಒಬ್ಬ ನ್ಯಾಯವಾದಿಯಾಗಿ ನಿರಪರಾಧಿಯ ಪರ ನಿಂತು ಸಹಾಯ ಮಾಡಿದ್ದು ಅಷ್ಟು ದೊಡ್ಡ ತಪ್ಪಾಯಿತೇ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ಬಿಜೆಪಿ ಪಕ್ಷ ಅನ್ಯಾಯವಾಗಿ ಅಸ್ಗರ್ ಮುಡಿಪು ಅವರನ್ನು ಪಕ್ಷದಿಂದ ಅಮಾನತು ಮಾಡಿರುವ ಬಗ್ಗೆ ನಾಯಕರ ಜೊತೆ ಮಾತಾಡಲು ನಾಯಕರನ್ನು ಸಂಪರ್ಕಿಸಿದಾಗ ತನ್ನ ಕರೆಯನ್ನೇ ಸ್ವೀಕರಿಸುವುದಿಲ್ಲ, ಹಲವು ವರ್ಷಗಳ ಕಾಲ ಬಿಜೆಪಿ ಪಕ್ಷಕ್ಕಾಗಿ ದುಡಿದ ನನ್ನಂತಹ ವ್ಯಕ್ತಿಗಳಿಗೆ ಈ ರೀತಿಯಾದರೆ ಸಾಮಾನ್ಯ ಕಾರ್ಯಕರ್ತರ ಗತಿಯೇನು ಎಂದು ಪ್ರಶ್ನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನಾಯಕರನ್ನು ಪ್ರಶ್ನಿಸಿದ ಫಝಲ್ ಅಸೈಗೋಳಿ ಅವರ ವಾಯ್ಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this on:
error: Content is protected !!