Latest Posts

ಉಡುಪಿ: ಸ್ಕಾರ್ಫ್ ವಿವಾದ

NSUI ರಾಜ್ಯ ನಿಯೋಗ ಕಾಲೇಜಿಗೆ ಭೇಟಿ.

ವಿಧ್ಯಾರ್ಥಿಗಳ ಪರವಾಗಿ ಕಾನೂನು ಹೋರಾಟಕ್ಕೆ NSUI ನಿರ್ಧಾರ

ಉಡುಪಿ: ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ ಸದ್ಯ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಚರ್ಚೆಗಳಾಗುತ್ತಿದ್ದು, ಈ ಬಗ್ಗೆ ಪರಿಶೀಲಿಸಲು ಕಾಂಗ್ರೆಸ್ ನಾಯಕರ ಸೂಚನೆಯಂತೆ ರಾಜ್ಯ NSUI ವಿಧ್ಯಾರ್ಥಿ ಘಟಕದ ನಿಯೋಗ ಇಂದು ಶುಕ್ರವಾರ ಬೆಳಿಗ್ಗೆ ಕಾಲೇಜಿಗೆ ಭೇಟಿ ನೀಡಿತು.
ಈ ಸಂಧರ್ಭದಲ್ಲಿ ಮಾತನಾಡಿದ NSUI ಕಾನೂನು ವಿಭಾಗದ ರಾಜ್ಯ ಮುಖಂಡ ಹಾಗೂ NSUI ರಾಜ್ಯ ಪದಾಧಿಕಾರಿಗಳು ವಿಧ್ಯಾರ್ಥಿಗಳ ಪರವಾಗಿ NSUI ಕಾನೂನು ಹೋರಾಟಕ್ಕೆ ನಿರ್ಧಾರ ಮಾಡಿದೆ ಹಾಗೂ ನ್ಯಾಯಾಲಯದ ಮೂಲಕ ವಿಧ್ಯಾರ್ಥಿಗಳಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡುವ ಆಶಾಭಾವನೆ ವ್ಯಕ್ತಪಡಿಸಿದರು.

NSUI ರಾಜ್ಯ ನಿಯೋಗ ಕಾಲೇಜಿಗೆ ಭೇಟಿ.


ಈ ಸಂಭಂದ ನ್ಯಾಯಾಲಯದಲ್ಲಿ ವಿಧ್ಯಾರ್ಥಿಗಳ ಪರ ಶೀಘ್ರದಲ್ಲೇ ರಿಟ್ ಅರ್ಜಿ ಹಾಕುವ ನಿರ್ಧಾರವನ್ನು ಪ್ರಕಟಿಸಿದರು.
NSUI ನಿಯೋಗ ಭೇಟಿ ನೀಡಿದ ಸಂಧರ್ಭ ಕಾಲೇಜು ಪ್ರಾಂಶುಪಾಲರು ಗೈರಾದ ಬಗ್ಗೆ ನಾಯಕರು ಅಸಮಾಧಾನ ವ್ಯಕ್ತಪಡಿಸಿದರು.
ನಿಯೋಗದಲ್ಲಿ NSUI ರಾಜ್ಯ ನಾಯಕರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪದಾಧಿಕಾರಿಗಳು ಕೂಡ ಹಾಜರಿದ್ದರು.

Share this on:
error: Content is protected !!