Latest Posts

ಶಾಲಾ ಕಾಲೇಜಿನಲ್ಲಿ ಹಿಜಾಬ್ ಧರಿಸುವುದು ಅಶಿಸ್ತು ಎಂದ ಶಿಕ್ಷಣ ಸಜಿವ ಬಿ.ಸಿ ನಾಗೇಶ್ ವಿರುದ್ದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ ಆಕ್ರೋಶ

ಬಹು ಸಂಖ್ಯಾತರಿಗೊಂದು ನ್ಯಾಯ, ಅಲ್ಪಸಂಖ್ಯಾತರಿಗೊಂದು ನ್ಯಾಯವೇಕೆ.?

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದು ಅಶಿಸ್ತು ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಹೇಳಿಕೆಗೆ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಹುಸಂಖ್ಯಾತರಿಗೆ ಒಂದು ನ್ಯಾಯ ಅಲ್ಪಸಂಖ್ಯಾತರಿಗೆ ಒಂದು ನ್ಯಾಯವೇಕೆ? ಬಿಜೆಪಿಯವರು ಕೋಮು ಮತ್ತು ಧರ್ಮ ರಾಜಕಾರಣ ಬಿಟ್ಟು ಬಿಡಲಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ಮಾನ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೆ, ತಮ್ಮ ಮೂರ್ಖತನದ ಹೇಳಿಕೆಯ ಪ್ರಕಾರ ಶಾಲೆಯಲ್ಲಿ ಶಾರದಾ ಪೂಜೆ, ಗಣೇಶೋತ್ಸವ ಆಚರಿಸಬಾರದು, ಹೆಣ್ಣು ಮಕ್ಕಳು ಕುಂಕುಮ, ಬಳೆ, ತಾಳಿ, ಕಾಲುಂಗುರ ತೊಡಬಾರದಲ್ಲವೆ ? ಬಹುಸಂಖ್ಯಾತರಿಗೆ ಒಂದು ನ್ಯಾಯ ಅಲ್ಪಸಂಖ್ಯಾತರಿಗೆ ಒಂದು ನ್ಯಾಯವೇಕೆ ? ಬಿಜೆಪಿಯವರು ಕೋಮು ಮತ್ತು ಧರ್ಮ ರಾಜಕಾರಣ ಬಿಟ್ಟು ಬಿಡಲಿ, ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಲಿ ಎಂದು ಕಿಡಿ ಕಾರಿದ್ದಾರೆ.

ಉಡುಪಿ ಸರಕಾರಿ ಕಾಲೇಜಿನ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಹೊಸ ರೂಪ‌ ಪಡೆಯುತ್ತಿದ್ದು ರಾಜಕೀಯ ಮೇಲುಗೈಯ ಅಖಾಡವಾಗಿದೆ. ಆಡಳಿತ ಮಂಡಳಿ ಹಾಗೂ ಮುಸ್ಲಿಂ ವಿಧ್ಯಾರ್ಥಿನಿಯರು ಯಾವುದೇ ಸಂಧಾನ ಪ್ರಕ್ರಿಯೆಗೆ ಒಪ್ಪದ ಕಾರಣ ಇದೊಂದು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ರಾಜ್ಯ ಎನ್ ಎಸ್ ಯು ಐ ಘಟಕ ಲೀಗಲ್ ಸೆಲ್ ಈಗಾಗಲೇ ಮುಸ್ಲಿಂ ವಿಧ್ಯಾರ್ಥಿನಿಯರ ಪರವಾಗಿ ಕಾನೂನಾತ್ಮಕ ಹೋರಾಟ ನಡೆಸುವ ಭರವಸೆ ಕೊಟ್ಟಿದೆ.
ರಾಜ್ಯ ಯುವ ಕಾಂಗ್ರೆಸ್ ಘಟಕವೂ ವಿಧ್ಯಾರ್ಥಿನಿಯರಿಗೆ ಸಂಪೂರ್ಣ ಬೆಂಬಲ ನೀಡಿದೆ.
ಮುಂದೆ ಹಿಜಾಬ್ ವಿವಾದ ಯಾವ ರೂಪ ಪಡೆಯುತ್ತದೆ ಎಂದು ಕಾದು ನೋಡಬೇಕಿದೆ.

Share this on:
error: Content is protected !!