ಬಂಟ್ವಾಳ : ಗಣರಾಜ್ಯೋತ್ಸವ ಅಂಗವಾಗಿ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ವಠಾರದಲ್ಲಿ ಧ್ವಜಾರೋಹಣವನ್ನು ಹಯತುಲ್ ಇಸ್ಲಾಂ ಕನ್ನಡ ಅನುದಾನಿತ ಶಾಲಾ ಉಸ್ತುವಾರಿಯಾದ ಅಬ್ದುಲ್ ರಶೀದ್ ರವರ ನೇತೃತ್ವ ದಲ್ಲಿ ಕಾರ್ಯಕ್ರಮ ನಡೆಯಿತು. ಮದ್ರಸ ಸದರ್ ಉಸ್ತಾದ್ ಬಶೀರ್ ಅಝ್ ಹರಿ ಉಸ್ತಾದರು ದು:ವಾ ನೆರವೇರಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಐ.ಎಂ.ರ್ ಇಕ್ಬಾಲ್, ಕಾರ್ಯಕ್ರಮದಲ್ಲಿ ರಾಮಚಂದ್ರ ಸರ್ ಮುಖ್ಯ ಭಾಷಣವನ್ನು ನಡೆಸಿ ಗಣರಾಜ್ಯೋತ್ಸವದ ಕುರಿತು ಸಂಕ್ಷಿಪ್ತವಾದ ವಿವರಣೆ ನೀಡಿದ್ದರು.


ಅಬ್ದುಲ್ ಮಜಿದ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಜಿ ಉಬೈದುಲ್ಲಾ , ಅಬೂಬಕ್ಕರ್ ಫೈಝಲ್ ಅನ್ಸಾರಿ, ಶಾಹುಲ್ ಹಮೀದ್ ಬದ್ರಿ, ಫಝಲ್ ರಾಹ್ಮನ್, ಅಬ್ದುಲ್ ಖಾದರ್ ಮದನಿ ರಹೀಮ್, ಕರೀಂ ಸಾಹೇಬ್, ಸತ್ತಾರ್, ತಸ್ನೀಮ ಮೇಡಂ, ಸುರೇಂದ್ರ ರಾವ್ ಆರಿಫ್, ಇಕ್ಬಾಲ್, ಸುಲೈಮಾನ್ ಹಾಗೂ ಹಯತುಲ್ ಇಸ್ಲಾಂ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಿಕ್ಷಕಿಯರು ಉಪಸ್ಥಿತರಿದ್ದರು.
ಎಸ್.ಕೆ.ಎಸ್.ಬಿ.ವಿ ಉಪಾಧ್ಯಕ್ಷರಾದ ಆಫ್ನಾನ್ ಸತ್ಯ ಪ್ರತಿಜ್ಞೆ ಬೋಧಿಸಿದರು. ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು ಬಾಲ ಇಂಡಿಯಾ ಮಾಡುವ ಮೂಲಕ 73ನೇ ಗಣರಾಜ್ಯೋತ್ಸವದ ಬಹಳ ಸಡಗರ ಸಂಭ್ರಮ ಆಚರಿಸಲಾಯಿತು ತ್ವಯ್ಯಿಬ್ ಫೈಝಿ ಕಾರ್ಯಕ್ರಮ ದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
