ಮಂಗಳೂರು: ಹಿಜಾಬ್ ಧರಿಸಲು ದೇಶದ ಸಂವಿಧಾನ ಹಕ್ಕು ನೀಡಿದೆ, ಧರ್ಮದ ಆಧಾರದಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ವಿಧ್ಯಾರ್ಥಿನಿಯರ ಮೂಲಭೂತ ಹಕ್ಕುಗಳನ್ನು ಕಸಿಯುವ ಮೂಲಕ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ವ್ಯವಸ್ಥಿತ ಹುನ್ನಾರ ಇದಾಗಿದ್ದು, ಅದರ ಹೆಸರಿನಲ್ಲಿ ಸಂಘಪರಿವಾರ ಪೋಷಿತ ಎಬಿವಿಪಿ ಸಂಘಟನೆಯ ವಿಧ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಕ್ಯಾಂಪಸ್ ಪ್ರವೇಶಿಸುವ ಮೂಲಕ ವಿಧ್ಯಾರ್ಥಿಗಳ ನಡುವೆ ಸಂಘರ್ಷ ಸೃಷ್ಟಿಸ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಸೆಕ್ಯುಲರ್ ಯೂತ್ ಫೋರಮ್ ಇದರ ರಾಜ್ಯ ಸಂಚಾಲಕ ಸಿ.ಎಮ್.ರವೂಫ್ ದೇರಳಲಟ್ಟೆ ಅವರು ಹೇಳಿದರು.
ಸಂಘಪರಿವಾರ ತನ್ನ ವಿಧ್ಯಾರ್ಥಿ ಸಂಘಟನೆ ಎಬಿವಿಪಿ ಯನ್ನು ಛೂ ಬಿಟ್ಟು ವಿಧ್ಯಾರ್ಥಿಗಳ ತಲೆಗೆ ಕೋಮು ವಿಷ ಬೀಜ ಬಿತ್ತುತ್ತಿರುವುದು ಬಹಳ ಅಪಾಯಕಾರಿ ಬೆಳವಣಿಗೆ ಹಾಗೂ ಧರ್ಮದ ಆಧಾರದಲ್ಲಿ ವಿಧ್ಯಾರ್ಥಿಗಳ ಮೂಲಭೂತ ಹಕ್ಕುಗಳನ್ನು ಕಸಿಯುವ ದುಷ್ಟ ಶಕ್ತಿಗಳನ್ನು ಪ್ರಬುದ್ಧ ನಾಗರಿಕ ಸಮಾಜ ಒಗ್ಗಟ್ಟಿನಿಂದ ಬಹಿಷ್ಕರಿಸಬೇಕಿದೆ ಎಂದರು.
ಮತ್ತೊಂದು ಕಡೆ ತನ್ನ ಆಡಳಿತ ವೈಫಲ್ಯಗಳಿಂದ ಕಂಗೆಟ್ಟು ಜನರಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ರಾಜ್ಯ ಬಿಜೆಪಿ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಈ ಸಂದರ್ಭವನ್ನು ಬಹಳ ವ್ಯವಸ್ಥಿತವಾಗಿ ಬಳಸಿಕೊಂಡಿದೆ ಎಂದು ಕಿಡಿಕಾರಿದರು.
ಹಿಂದೂ ಧರ್ಮದ ಸಂಸ್ಕೃತಿಯಂತೆ ಶಾಲಾ ಕಾಲೇಜುಗಳಲ್ಲಿ ಭಜನೆ, ಪೂಜೆ ಇನ್ನಿತರ ಧಾರ್ಮಿಕ ಚಟುವಟಿಕೆಗಳು ಹಾಗೂ ಎಷ್ಟೋ ವಿಧ್ಯಾರ್ಥಿಗಳು ಹಣೆಗೆ ತಿಲಕ, ಕುಂಕುಮ ಹಾಕಿ ಕಾಲೇಜಿಗೆ ಹೋಗುತ್ತಾರೆ.
ಅಲ್ಲಿ ಅದನ್ನು ಯಾವೊಬ್ಬ ಮುಸಲ್ಮಾನನೂ ವಿರೋಧಿಸಿದ, ತಡೆದ ಚರಿತ್ರೆ ಇಲ್ಲ, ಇತರ ಧರ್ಮೀಯರಿಗೆ, ಅವರ ಆಚರಣೆಗಳಿಗೆ ಯಾವುದೇ ರೀತಿ ಅಡ್ಡಿ ಪಡಿಸದೆ ಪರಸ್ಪರ ಗೌರವ ಕೊಟ್ಟು ಜೀವಿಸಲು ಇಸ್ಲಾಂ ಧರ್ಮ ಬೋಧಕರು ಕಲಿಸಿಕೊಡುತ್ತಾರೆ ಎಂದರು.
ಹಿಜಾಬ್ ವಿವಾದದ ಹಿಂದೆ ಮುಸ್ಲಿಂ ವಿಧ್ಯಾರ್ಥಿನಿಯರನ್ನು ಶಿಕ್ಷಣ ವಂಚಿತರನ್ನಾಗಿಸುವ ವ್ಯವಸ್ಥಿತ ಹುನ್ನಾರ.
ಸಂಘಪರಿವಾರ ಎಬಿವಿಪಿ ಮೂಲಕ ವಿಧ್ಯಾರ್ಥಿಗಳ ತಲೆಗೆ ಕೋಮು ವಿಷ ಬೀಜ ಬಿತ್ತುತ್ತಿರುವುದು ಅಪಾಯಕಾರಿ.!
ಧರ್ಮದ ಆಧಾರದಲ್ಲಿ ವಿಧ್ಯಾರ್ಥಿಗಳ ಮೂಲಭೂತ ಹಕ್ಕುಗಳನ್ನು ಕಸಿಯುವ ದುಷ್ಟ ಶಕ್ತಿಗಳನ್ನು ಸಮಾಜ ಬಹಿಷ್ಕರಿಸಬೇಕಿದೆ.
SYF ರಾಜ್ಯ ಸಂಚಾಲಕ ಸಿ.ಎಮ್.ರವೂಫ್ ಕಿಡಿ
