ಉಡುಪಿ: ನಿನ್ನೆ ಹಿಜಾಬ್ ವಿವಾದದ ಬಗ್ಗೆ ಜರುಗಿದ ಶಾಂತಿಸಭೆಯ ಬಳಿಕ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಅವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಶಾಂತಿಸಭೆಯಲ್ಲಿ ರಘುಪತಿ ಭಟ್ ಸಹಿತ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಆ ಸಭೆಯಲ್ಲಿ ಎಸ್ಡಿಪಿಐ ನಾಯಕ ಕೂಡ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಉಚ್ಚ ನ್ಯಾಯಾಲಯ ಅಂತಿಮ ತೀರ್ಪು ಬರುವುದಕ್ಕಿಂತ ಮುಂಚೆ ಸರಕಾರ ಎಲ್ಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ವಸ್ತ್ರ ಧರಿಸದಂತೆ ನಿರ್ಬಂಧ ವಿಧಿಸಿತ್ತು. ನ್ಯಾಯಾಲಯದ ಆದೇಶದಂತೆ ಫೆ.14 ರಂದು ಕಾಲೇಜು ಪುನರಾರಂಭಗೊಂಡಿತ್ತು. ಅದರ ಪೂರ್ವಭಾವಿಯಾಗಿ ಸರ್ವಪಕ್ಷ ಸಭೆ ಆಯೋಜಿಸಲಾಗಿತ್ತು. ಸದ್ರಿ ಸಭೆಯಲ್ಲಿ ಎಸ್ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷರಾದ ನಝೀರ್ ಅಹ್ಮದ್ ಅವರು ನೀಡಿರುವ ಹೇಳಿಕೆಯು ಎಲ್ಲರಿಗೂ ಆಶ್ಚರ್ಯ ಮತ್ತು ಚಿಂತಾ ಚಕಿತಗೊಳಿಸಿತ್ತು.
ಇಷ್ಟರವರೆಗೆ ಸಿಎಫ್ಐ ಮತ್ತು ಪಿಎಫ್ಐ ನಡೆಸಿದ ಪ್ರತಿಭಟನೆಗೆ ವಿರುದ್ದ ನಿಲುವು ಪ್ರಕಟಿಸಿದ ಬಗ್ಗೆ ನಝೀರ್ ಅವರು ಸ್ವಪಕ್ಷೀಯರಿಂದಲೇ ಟೀಕೆಗೊಳಗಾಗಿದ್ದಾರೆ.
ಪ್ರಜ್ಞಾವಂತರ, ಬುದ್ದಿವಂತರ ಜಿಲ್ಲೆಯಲ್ಲಿ ಈ ರೀತಿಯ ಗಲಭೆಗಳು ಯಾವತ್ತೂ ಆಗುವುದಿಲ್ಲ. ಸಣ್ಣ ವಿಚಾರ ಹೊರಗಡೆ ಹೋಗಿದೆ. ಈ ಪ್ರಕರಣವನ್ನು ಶಾಂತಿಯುತವಾಗಿ ಬಗೆಹರಿಸಬೇಕಾಗಿದೆ. ಹಿಜಾಬ್ ರಹಿತವಾಗಿ ಶಾಲೆಗೆ ಕಳುಹಿಸುವುದು ಪೋಷಕರಿಗೆ ಬಿಟ್ಟ ತೀರ್ಮಾನ” ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರ ಶಾಂತಿಯುತವಾಗಿ ಬಗೆಹರಿಸಲು ಇಷ್ಟು ದಿವಸ ಪ್ರತಿಭಟನೆ ಮಾಡಿ ಈಗ ನೆನಪಾಯಿತೆ ? ಎಂದು ಕೇಳಿದ್ದಾರೆ.
ಮತ್ತೊಬ್ಬರು ಸಿಎಫ್ಐ ಕಾರ್ಯಕರ್ತ ಹಿಜಾಬ್ ರಹಿತ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಪೋಷಕರಿಗೆ ಬಿಟ್ಟ ವಿಚಾರ ಅಂತ ಅಂದಿದ್ದಕ್ಕೆ ನಝೀರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡದ್ದಲ್ಲದೆ ಹಿಜಾಬ್ ರಹಿತವಾಗಿ ಕಾಲೇಜಿಗೆ ಕಳುಹಿಸುವುದಾದರೆ ಇಷ್ಟು ದಿವಸ ಹೋರಾಟ ಮಾಡಿದ್ದು ಯಾವ ಪುರುಷಾರ್ಥಕ್ಕೆ ಅಂತ ಕ್ರೋಧ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಎಸ್ಡಿಪಿಐ ಕಾರ್ಯಕರ್ತ ಅವತ್ತು ಶಾಸಕ ಯುಟಿಕೆ ಹೇಳಿದ ಸಣ್ಣ ವಿಚಾರದ ಬಗ್ಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದೆ. ಇವತ್ತು ನಮ್ಮವರೇ ಹಿಜಾಬ್ ರಹಿತ ಹೇಳಿಕೆ ಕೊಟ್ಟು ನಮ್ಮನ್ನು ತೀವ್ರ ಮುಜುಗರಕ್ಕೀಡುಮಾಡಿದ್ದಾರೆ ಎಂದು ನೋವು ವ್ಯಕ್ತಪಡಿಸಿದ್ದಾರೆ.
ಹಿಜಾಬ್ ವಿವಾದ ಕಾಲೇಜು ಒಳಗಿನ ಸಣ್ಣ ವಿಚಾರ!
ಹಿಜಾಬ್ ರಹಿತವಾಗಿ ಶಾಲೆಗೆ ಕಳುಹಿಸುವುದು ಪೋಷಕರಿಗೆ ಬಿಟ್ಟ ತೀರ್ಮಾನ
ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಅವರ ಹಿಜಾಬ್ ರಹಿತ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸ್ವಪಕ್ಷದವರಿಂದಲೇ ಆಕ್ರೋಶ
