Latest Posts

ಹಿಜಾಬ್, ಕೇಸರಿ ಶಾಲು ವಿವಾದದ ಹಿನ್ನೆಲೆ:
ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದ ಸಚಿವ ಈಶ್ವರಪ್ಪರನ್ನು ದೇಶದ್ರೋಹಿ ಎಂದು ಘೋಷಿಸಬೇಕು: ಸಿದ್ದಾರಾಮಯ್ಯ ಆಗ್ರಹ
ಸದನದ ಬಾವಿಗಿಳಿದು ಕಾಂಗ್ರೆಸ್ ಪ್ರತಿಭಟನೆ
ಡಿಕೆಶಿ-ಈಶ್ವರಪ್ಪ ಪರಸ್ಪರ ವಾಕ್ಸಮರ

ಬೆಂಗಳೂರು: ಇಂದು ವಿಧಾನಸಭೆ ಕಲಾಪ ವಾಕ್ಸಮರ, ಪ್ರತಿಭಟನೆಯ ಕೇಂದ್ರವಾಯಿತು.
ಅತ್ತ ಕಲಾಪ ಆರಂಭವಾಗುತ್ತಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಚಿವ ಈಶ್ವರಪ್ಪ ಅವರ ವಿವಾದಿತ ಹೇಳಿಕೆಯನ್ನು ಪ್ರಸ್ತಾಪಿಸಿದರು.
ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜವೇ ಹಾರಾಡಬೇಕು ಹೊರತು ಯಾವುದೇ ಧ್ವಜ ಹಾರಾಡುವಂತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಹೇಳಿಕೆ ನೀಡಿದ ಈಶ್ವರಪ್ಪ ಅವರನ್ನು ಈ ಕೂಡಲೇ ಮಂತ್ರಿಮಂಡಲದಿಂದ ಉಚ್ಚಾಟನೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದಾರಾಮಯ್ಯ ಆಗ್ರಹಿಸಿದರು.
ಈಶ್ವರಪ್ಪ ಲೂಟಿಕೋರರು, ಕೆಂಪುಕೋಟೆಯಲ್ಲಿ ರಾಷ್ಟ್ರ ದ್ವಜದ ಬದಲಾಗಿ ಕೇಸರಿ ಧ್ವಜ ಹಾರಿಸುತ್ತೇನೆಂದ ಒಬ್ಬ ದೇಶದ್ರೋಹಿ.
ಅವರನ್ನು ಈ ಕೂಡಲೇ ಸಂಪುಟದಿಂದ ವಜಾ ಮಾಡಿ ದೇಶದ್ರೋಹದ ಪ್ರಕರಣ ದಾಖಲಿಸಿ ಎಂದು ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಈ ಮಧ್ಯೆ ಸ್ಪೀಕರ್ ರವರು ಮಧ್ಯಪ್ರವೇಶಿಸಿ ಈಶ್ವರಪ್ಪನವರಿಗೆ ಮಾತನಾಡಲು ಅವಕಾಶ ಕೊಡುತ್ತೇನೆ ಎಂದಾಗ ವಿಪಕ್ಷ ಸದಸ್ಯರು ಪ್ರತಿಭಟಿಸಿ ಯಾವುದೇ ಕಾರಣಕ್ಕೂ ಈಶ್ವರಪ್ಪನವರಿಗೆ ಮಾತನಾಡಲು ಅವಕಾಶ ನೀಡಬೇಡಿ, ಈಗಲೇ ದೇಶದ್ರೋಹಿ ಈಶ್ವರಪ್ಪರನ್ನು ವಜಾ ಮಾಡಿ ಎಂದು ಗದ್ದಲ ಎಬ್ಬಿಸಿದರು. ಇದೇ ವೇಳೆ ಡಿಕೆಶಿ ಈಶ್ವರಪ್ಪ ಮಧ್ಯೆ ವಾಗ್ವಾದ ನಡೆಯಿತು. ಧರಣಿ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕಲಾಪವನ್ನು ಮುಂದೂಡಲಾಯಿತು.

Share this on:
error: Content is protected !!