Latest Posts

ಬಿ.ಮೂಡ ವಲಯ ಯುವ ಕಾಂಗ್ರೆಸ್ ವತಿಯಿಂದ ‘ಯುವಕರ ನಡೆ ಸಾಮರಸ್ಯದ ಕಡೆ’ ಕಾರ್ಯಕ್ರಮ

ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ.

ಬಂಟ್ವಾಳ: ಬಿ.ಮೂಡ ವಲಯ ಯುವ ಕಾಂಗ್ರೆಸ್ ವತಿಯಿಂದ ‘ಯುವಕರ ನಡೆ ಸಾಮರಸ್ಯದ ಕಡೆ’ ಕಾರ್ಯಕ್ರಮವು ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್ ಪಧಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿ ಸನ್ಮಾನಿಸಲಾಯಿತು.

ಗೂಡಿನಬಳಿ ಯುವ ಕಾಂಗ್ರೆಸ್ ಪಧಾಧಿಕಾರಿಗಳಾದ ಮುನೀರ್, ತೌಸೀಫ್, ಆಸಿಫ್, ಅಕ್ಬರ್, ಉವೈಸ್‌ ಹಾಗೂ ಅನಸ್ ಪ್ರಮಾಣ ಪತ್ರ ಸ್ವೀಕರಿಸಿದರು.
ನಂದಾರು ಬೆಟ್ಟು ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಮೊಹಮ್ಮದ್ ಫಾರಿಸ್, ಇರ್ಫಾನ್ ಪಿ, ಮೊಹಮ್ಮದ್ ಆರಿಫ್ ಹಾಗೂ ಮೊಹಮ್ಮದ್ ಲತೀಫ್ ರವರು ಪ್ರಮಾಣ ಪತ್ರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ಬಾಸ್ ಆಲಿ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಇಬ್ರಾಹೀಂ ನವಾಝ್, ಎನ್.ಎಸ್.ಯು.ಐ ರಾಜ್ಯ ಸಂಯೋಜಕರಾದ ವಿನಯ್ ಕುಮಾರ್ ಸಿಂಧ್ಯಾ, ವಲಯ ಅಧ್ಯಕ್ಷರಾದ ಲೋಲಾಕ್ಷ ಶೆಟ್ಟಿ, ಲೋಕೇಶ್ ಸುವರ್ಣ, ಯುವ ಕಾಂಗ್ರೆಸ್ ಉಸ್ತುವಾರಿ ಅಲೀಂ ಗೂಡಿನಬಳಿ, ವಲಯ ಯುವ ಅಧ್ಯಕ್ಷರಾದ ಸಗೀರ್, ಇಮ್ತಿಯಾಜ್ ಕಲ್ಲಡ್ಕ, ಚಾಚ ಖಾದರ್, ರಝಾಕ್ ಟಿ ಹಾಗೂ ಇತರ ಯುವ ಕಾಂಗ್ರೆಸ್ ಪಧಾದಿಕಾರಿಗಳು ಉಪಸ್ಥಿತರಿದ್ದರು.

Share this on:
error: Content is protected !!