ತಿರುವನಂತಪುರಂ: ಕೇರಳ ಸರಕಾರದ ವೈಪಲ್ಯದಿಂದ ಸಚಿವಾಲಯದ ಸೆಕ್ರಟಿಯೇಟ್ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದರು. ಬೆಂಕಿಯಲ್ಲಿ ಪ್ರಮುಖ ಫೈಲ್ ಗಳು ನಾಶವಾಗಿದೆ ಎಂದು ವರದಿಯಾಗಿದೆ.
ಸೆಕ್ರಟಿಯೇಟ್ ವಿಭಾಗದಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು, ಚಿನ್ನದ ಕಳ್ಳಸಾಗಣೆ ಸೇರಿದಂತೆ ವಿವಾದಾತ್ಮಕ ವಿಷಯಗಳಿಗೆ ಸಂಬಂಧಿಸಿದ ನಿರ್ಣಾಯಕ ದಾಖಲೆಗಳನ್ನು ಶೇಖರಿಸಲಾಗಿತ್ತು.ಇದು ವ್ಯವಸ್ಥಿತವಾಗಿ ನಡೆದ ಸಂಚು,ಉದ್ದೇಶಪೂರ್ವಕವಾಗಿ ಬೆಂಕಿಯನ್ನು ಹಚ್ಚಲಾಗಿದೆ ಎಂದು ಪ್ರತಿಪಕ್ಷದ ನಾಯಕರು ಆರೋಪಿಸಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸೆಕ್ರಟರಿಯೇಟ್ ಕಚೇರಿಯಿಂದ ಹೊಗೆ ಏರುತ್ತಿರುವುದನ್ನು ಕಂಡ ನೌಕರರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೂಚಿಸಿದರು.
ಬದಿಯಲ್ಲಿರುವ ಏರ್ ಕಂಡೀಶನ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ನೌಕರರು ಹೇಳುತ್ತಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ತಿಳಿಸಿದ್ದಾರೆ.