Latest Posts

ಮುಸ್ಲಿಮರ ನುಸುಳುವಿಕೆ ಎಂಬ ವಿವಾದಾತ್ಮಕ ಕಾರ್ಯಕ್ರಮ ನಡೆಸುವ ಸುದರ್ಶನ ಚಾನೆಲಿಗೆ ತಡೆಯಾಜ್ಞೆ ನೀಡಿದ ದೆಹಲಿಯ ಉಚ್ಚ ನ್ಯಾಯಾಲಯ

ಹೊಸದಿಲ್ಲಿ,ಆ.28: ನಾಗರಿಕ ಸೇವೆಗಳಲ್ಲಿ ‘ಮುಸ್ಲಿಮರ ನುಸುಳುವಿಕೆ ’ಯನ್ನು ಬಯಲಿಗೆಳೆಯುತ್ತದೆ ಎಂದು ಹೇಳಿಕೊಳ್ಳಲಾಗಿರುವ ಕಾರ್ಯಕ್ರಮವನ್ನು ಸುದರ್ಶನ ಟಿವಿಯು ಪ್ರಸಾರಿಸುವುದಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ತಡೆಯಾಜ್ಞೆಯನ್ನು ನೀಡಿದೆ.
.
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾ.ನವೀನ ಚಾವ್ಲಾ ಅವರ ಏಕ ನ್ಯಾಯಾಧೀಶ ಪೀಠವು ಈ ಆದೇಶವನ್ನು ಹೊರಡಿಸಿದೆ.
.
ಸುದರ್ಶನ ಸುದ್ದಿವಾಹಿನಿಯ ಮುಖ್ಯಸಂಪಾದಕ ಸುರೇಶ್ ಚವ್ಹಾಣಕೆ ಅವರು ಆ.26ರಂದು ‘ಯುಪಿಎಸ್‌ಸಿ ಜಿಹಾದ್’ ಹ್ಯಾಷ್‌ಟ್ಯಾಗ್‌ನೊಂದಿಗೆ ಶೇರ್ ಮಾಡಿಕೊಂಡ ಕಾರ್ಯಕ್ರಮದ ಪ್ರೋಮೊ ವೀಡಿಯೊಗೆ ಹಲವಾರು ಟೀಕೆಗಳು ವ್ಯಕ್ತವಾಗಿವೆ. ತನ್ನ ಮುಂಬರುವ ಕಾರ್ಯಕ್ರಮದ ಟ್ರೇಲರ್‌ನ್ನು ಟ್ವೀಟ್ ಮಾಡಿದ್ದ ಚವ್ಹಾಣಗೆ ಇದು ನಾಗರಿಕ ಸೇವೆಗಳಲ್ಲಿ ‘ಮುಸ್ಲಿಮರ ನುಸುಳುವಿಕೆ ’ಯನ್ನು ಬಯಲಿಗೆಳೆಯಲಿದೆ ಎಂದು ಹೇಳಿಕೊಂಡಿದ್ದರು.
.
ಚವ್ಹಾಣಕೆ ತನ್ನ ವೀಡಿಯೊದಲ್ಲಿ ಜಾಮಿಯಾದ ರೆಸಿಡೆಂಶಿಯಲ್ ಕೋಚಿಂಗ್ ಅಕಾಡೆಮಿ (ಆರ್‌ಸಿಎ)ಯಿಂದ ತರಬೇತಿ ಪಡೆದು ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ತೇರ್ಗಡೆಗೊಳ್ಳುವವರನ್ನು ‘ಜಾಮಿಯಾ ಕೆ ಜಿಹಾದಿ’ಗಳೆಂದು ಬಣ್ಣಿಸಿದ್ದರು. ವಿವಿಯ ವರ್ಚಸ್ಸಿಗೆ ಕಳಂಕವುಂಟು ಮಾಡುತ್ತಿರುವುದಕ್ಕಾಗಿ ಸುದರ್ಶನ ಸುದ್ದಿವಾಹಿನಿ ಮತ್ತು ಚವ್ಹಾಣಕೆ ಅವರ ವಿರುದ್ಧ ಕ್ರಮವನ್ನು ಜರುಗಿಸುವಂತೆ ಕೋರಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಗುರುವಾರ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಪತ್ರವನ್ನು ಬರೆದಿತ್ತು.

Share this on:
error: Content is protected !!