Latest Posts

ಹಬ್ಬಗಳ ನಡುವೆ ಕೊರೋನಾ ಬಗ್ಗೆ ಎಚ್ಚರಿಕೆ ಇರಲಿ, ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿರಲಿ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ:-ಈಗ ಹಬ್ಬ, ಜಾತ್ರೆ, ಮದುವೆಯ ಸಮಯ, ಅವುಗಳನ್ನು ಸಂತೋಷ, ಸಂಭ್ರಮಗಳಿಂದ ಆಚರಿಸುವುದರ ಮಧ್ಯೆ ಕೊರೋನಾ ವೈರಸ್ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಮರೆಯಬೇಡಿ, ಜನರು ಇನ್ನಷ್ಟು ಜಾಗರೂಕತೆಯಿಂದ ಇರುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಅವರು ಇಂದು ಆಕಾಶವಾಣಿ ರೇಡಿಯೊದಲ್ಲಿ ತಮ್ಮ ತಿಂಗಳ ಕೊನೆಯ ಭಾನುವಾರದ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಅಂದರೆ 78 ಸಾವಿರ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇದರಿಂದ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 35 ಲಕ್ಷ ಗಟಿ ದಾಟಿದೆ. ಬ್ರೆಜಿಲ್ ದೇಶದಲ್ಲಿ 38 ಲಕ್ಷ ಸೋಂಕಿತರಿದ್ದು ಅದನ್ನು ದಾಟುವ ಬೊಂಡರಿ ಲೈನಿನ ಹತ್ತಿರದಲ್ಲಿಯೇ ನಮ್ಮ ದೇಶ ಇದೆ. ಕೊರೋನಾ ವೈರಸನ್ನು ತಡೆಗಟ್ಟಲು ಲಾಕ್ ಡೌನ್ ಮಾಡಿದ ಮೇಲೆ ಜನರಲ್ಲಿ ಶಿಸ್ತಿನ ಪ್ರಜ್ಞೆ ಹೆಚ್ಚಾಗಿದೆ. ಅದನ್ನು ಇನ್ನಷ್ಟು ಬೆಳೆಸಿಕೊಳ್ಳಿ ಎಂದು ದೇಶವಾಸಿಗಳಿಗೆ ಪ್ರಧಾನಿ ಕರೆ ನೀಡಿದ್ದಾರೆ.

ಮುಂಬರುವ ದಿನಗಳಲ್ಲಿ ಹಬ್ಬದ ದಿನಗಳು ಹೆಚ್ಚಾಗುತ್ತದೆ. ಹಾಗೆ ಕೋವಿಡ್ ಹಿನ್ನೆಲೆಯಲ್ಲಿ ಜನರಲ್ಲಿ ಶಿಸ್ತಿನ ಭಾವನೆ ಹೆಚ್ಚಾಗುತ್ತಿದೆ, ಅದನ್ನು ಇನ್ನಷ್ಟು ಬೆಳೆಸಿಕೊಳ್ಳಿ. ಜನರು ಮುಂಜಾಗ್ರತೆ, ಸುರಕ್ಷತೆ ಕ್ರಮಗಳನ್ನು ಅಳವಡಿಸಿಕೊಂಡರೆ ಮಾತ್ರ ಈ ವೈರಸ್ ನ್ನು ನಾವು ಗೆಲ್ಲಬಹುದು. 2 ಮೀಟರ್ ಅಂತರವನ್ನು ಕಡ್ಡಾಯವಾಗಿ ಪಾಲಿಸಿ ಎಂದರು.

ಇಂದು ದೇಶದಲ್ಲಿ ಪ್ರತಿಯೊಂದು ಸಂಶೋಧನಾ ಕೇಂದ್ರದಲ್ಲಿ ಹೊಸ ಲಸಿಕೆಯನ್ನ ಹುಡುಕುವ ಪ್ರಯತ್ನ ನಡೆಯುತ್ತಿದೆ. ಸೀನಿಯರ್ ವಿಭಾಗ ಜೂನಿಯರ್ ವಿಭಾಗ ಒಟ್ಟಾಗಿ ಸೇರಿ ಹೊಸ ಲಸಿಕೆಯನ್ನು ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ.ಸಂಶೋಧನೆಯ ಸಾಮರ್ಥ್ಯದಲ್ಲಿ ಭಾರತೀಯರ ಮೆಲುಗೈ ಎಷ್ಟಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ.

ಇದೇ ರೀತಿ ಮಕ್ಕಳ ಶಿಕ್ಷಣ ಭಾಗವಾಗಿ ಆನ್‌ಲೈನ್ ತರಬೇತಿ ಆರಂಭವಾಗಿದೆ, ಇದಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಒಳ್ಳೆಯ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗೆ ಜನರಲ್ಲಿ ನಿಷ್ಠೆ, ಶ್ರದ್ಧೆ, ಶಕ್ತಿ ಸಾಕಷ್ಟಿದೆ. ಇದನ್ನು ನಾವು ಕೈಬಿಡಬಾರದೆಂದು ಮೋದಿಯವರು ಪ್ರತ್ಯೇಕವಾಗಿ ಸೂಚಿಸಿದರು

Share this on:
error: Content is protected !!