Latest Posts

ಸೇಡಿನ ರಾಜಕೀಯಕ್ಕೆ ಬೆಚ್ಚಿ ಬಿದ್ದ ಕೇರಳ , ಡಿವೈಎಫ್ಐ ಕಾರ್ಯಕರ್ತರಿಬ್ಬರ ಬರ್ಬರ ಕೊಲೆ: ಕಾಂಗ್ರೆಸ್ ಕೈವಾಡವಿದೆಯೆಂದು ಸಿಪಿಎಂ ಆರೋಪ

keraladyfimurder

ತಿರುವನಂತಪುರಂ: ತಿರುವನಂತಪುರಂನ ವೆಂಜರನ್ಮೂಡಿನಲ್ಲಿ ಇಬ್ಬರು ಡಿವೈಎಫ್‌ಐ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ದಾಳಿ ನಡೆದಿದೆ. ದಾಳಿಯಲ್ಲಿ ಹಕ್ ಮೊಹಮ್ಮದ್ (24) ಮತ್ತು ಮಿಥಿಲಾಜ್ (30) ಮೃತಪಟ್ಟಿದ್ದಾರೆ. ಹಕ್ ಮೊಹಮ್ಮದ್ ಸಿಪಿಐ (ಎಂ) ಕಳಿಂಗಂ ಶಾಖಾ ಸಮಿತಿಯ ಸದಸ್ಯ ಮತ್ತು ಡಿವೈಎಫ್‌ಐ ಕಳಿಂಗನ್ ಘಟಕದ ಅಧ್ಯಕ್ಷರಾಗಿದ್ದಾರೆ.

ಮಿಥಿಲಾಜ್ ಡಿವೈಎಫ್‌ಐ ತೇವಲಕ್ಕಾಡ್ ಘಟಕ ಕಾರ್ಯದರ್ಶಿ. ಈ ಹಿಂದೆ ಈ ಪ್ರದೇಶದಲ್ಲಿ ಕಾಂಗ್ರೆಸ್-ಸಿಪಿಎಂ ಘರ್ಷಣೆ ನಡೆದಿತ್ತು.ಈ ಹತ್ಯೆಗಳ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿದೆ.

Share this on:
error: Content is protected !!