Latest Posts

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ಸಂತಾಪವಾಗಿ ದೇಶವಿಡೀ 7 ದಿನಗಳ ಶೋಕಾಚರಣೆ

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ದೇಶವಿಡೀ ಸಂತಾಪ ಸೂಚಿಸಿದೆ. ಇದಕ್ಕನುಸಾರವಾಗಿ ಕೇಂದ್ರ ಗೃಹ ಸಚಿವಾಲಯವು ಸೆಪ್ಟೆಂಬರ್ 6 ರವರೆಗೆ ರಾಷ್ಟ್ರೀಯ ಶೋಕಾಚರಣೆಯ ಸ್ಥಿತಿಯನ್ನು ಘೋಷಿಸಿದೆ. ಅವರ ಗೌರವಾರ್ಥ ರಾಷ್ಟ್ರಪತಿ ಭವನ ಮತ್ತು ಸಂಸತ್ ಭವನದಲ್ಲಿ ಅರ್ಧದಷ್ಟು ಕೆಳಗೆ ಕಟ್ಟಿ ರಾಷ್ಟ್ರಧ್ವಜವನ್ನು ಹಾರಿಸಬೇಕೆಂದು ಮತ್ತು ಅವರ ಪಾರ್ಥಿವ ಶರೀರವನ್ನು ಸಂಸ್ಕಾರ ಮಾಡುವ ಸ್ಥಳ ದಿನಾಂಕ ಸಧ್ಯದಲ್ಲೇ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.

ದೇಶದ ಶೋಕಾಚರಣೆಯ ಅಂಗವಾಗಿ ಸೆಪ್ಟೆಂಬರ್ 6 ರವರೆಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ರಾಜ್ಯ ಶೋಕ ವ್ಯಕ್ತಪಡಿಸಲಿದೆ. ಈ ದಿನಗಳಲ್ಲಿ ಯಾವುದೇ ಅಧಿಕೃತ ಆಚರಣೆಗಳು ಇರುವುದಿಲ್ಲ ಎಂದು ಪ್ರಧಾನ ಮಂತ್ರಿ ಕಾರ್ಯಕಾರಿ ಸಮಿತಿ ತಿಳಿಸಿದ್ದಾರೆ

Share this on:
error: Content is protected !!