Latest Posts

ಪ್ರಧಾನಮಂತ್ರಿ ಹೊರತಂದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ವಾರಿಯನ್ ಕುನ್ನತ್ ಮತ್ತು ಅಲಿ ಮುಸ್ಲಿಯಾರ್

ನವದೆಹಲಿ: ಪ್ರಧಾನಿ ಬಿಡುಗಡೆ ಮಾಡಿದ ಹುತಾತ್ಮರ ಪಟ್ಟಿಗೆಯಲ್ಲಿ ಕುಂಙಿಮ್ಮದ್ ಹಾಜಿ ಮತ್ತು ಅಲಿ ಮುಸ್ಲಿಯಾರ್ ರ ಹೆಸರನ್ನು ಸೇರಿಸಲಾಗಿದೆ.

ಈ ಪುಸ್ತಕ 2018 ರಲ್ಲಿ ಪ್ರಕಟವಾಗಿದ್ದು ವಿವಿಧ ರಾಜ್ಯಗಳಿಂದ ಸ್ವಾತಂತ್ರ್ಯ ಸಮರಕ್ಕೆ ಭಾಗವಹಿಸಿದವರ ಹೆಸರನ್ನೊಳಗೊಂಡಿದೆ.1857 ರಿಂದ 1947 ರವರೆಗಿನ ಹುತಾತ್ಮರ ಹೆಸರುಗಳನ್ನು ಸೇರಿಸಲಾಗಿದೆ.

ವಾರಿಯನ್ ಕುನ್ನತ್ ಕುನ್ಹಮ್ಮದ್ ಹಾಜಿ ಮಲಬಾರ್‌ನ ಮೊಯಿದೀನ್ ಹಾಜಿ ಮತ್ತು ಅಮಿನ ದಂಪತಿಯ ಮಗನಾಗಿ ಜನಿಸಿದರು ಮತ್ತು ಅವರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸೇರಿಸಲಾಗಿದೆ.ಈ ಹಿಂದೆ ಕೇರಳದ ನಿರ್ಮಾಪಕರೊಬ್ಬರು ವಾರಿಯನ್ ಕುನ್ನತ್ ರವರ ಸಿನಿಮಾ ನಿರ್ಮಿಸುವ ಹೇಳಿಕೆ ನೀಡಿದಾಗ ಬಿಜೆಪಿ ಮತ್ತು ಸಂಘಪರಿವಾರ ವಿರೋಧಿಸಿ ಕೋಮುವಾದಿಗಳ ಹಾಗೆ ಚಿತ್ರೀಕರಿಸಿದ್ದರು.

ಮಲಬಾರ್ ಸ್ವಾತಂತ್ರ್ಯ ಸಮರ ಹಿಂದೂ ವಿರೋಧಿ ಮತ್ತು ಸ್ವಾತಂತ್ರ್ಯ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಂಘ ಪರಿವಾರ ನಾಯಕರು ವ್ಯಾಪಕ ಪ್ರಚಾರ ನಡೆಸುತ್ತಿದ್ದ ಸಮಯದಲ್ಲಿ ಪ್ರಧಾನಿ ಬಿಡುಗಡೆ ಮಾಡಿದ ಸ್ವಾತಂತ್ರ್ಯ ಹೋರಾಟದ ಹುತಾತ್ಮರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ ಎಂಬುದು ಗಮನಾರ್ಹ.

Share this on:
error: Content is protected !!