Latest Posts

ರಾಜಸ್ಥಾನ ಸರ್ಕಾರದ ಕೈ ಕೆಳಗೆ ತಾವು ಸುರಕ್ಷಿತರು;ಕಫೀಲ್ ಖಾನ್ ಗೆ ಭರವಸೆ ನೀಡಿದ ಪ್ರಿಯಾಂಕಾ ಗಾಂಧಿ

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇರುವವರೆಗೂ ಸುರಕ್ಷಿತವಾಗಿರುತ್ತೇನೆಂಬ ಭರವಸೆ ಇದೆ ಎಂದು ಡಾಕ್ಟರ್ ಕಫೀಲ್ ಖಾನ್ ಹೇಳಿದ್ದಾರೆ.

ಕಫೀಲ್ ಖಾನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕಾ ಗಾಂಧಿ ಅವರು ನನ್ನನ್ನು ಕರೆದು ಆಶ್ವಾಸನೆ ನೀಡಿದ ನಂತರವೇ ರಾಜಸ್ಥಾನಕ್ಕೆ ತೆರಳಿದ್ದೇನೆಂದು ವ್ಯಕ್ತಪಡಿಸಿದರು.ಪ್ರಿಯಾಂಕಾ ಅವರು ರಾಜಸ್ಥಾನಕ್ಕೆ ಬರಲು ಕೇಳಿಕೊಂಡಿದ್ದಾರೆ ಮತ್ತು ತಾವು ಅಲ್ಲಿ ಸುರಕ್ಷಿತವಾಗಿರುತ್ತೀರಿ ಎಂದು ಭರವಸೆಯನ್ನೂ ನೀಡಿದ್ದರೆಂದೂ ತಿಳಿಸಿದ್ದಾರೆ. ಪ್ರಿಯಾಂಕಾ ಗಾಂಧಿ ನನ್ನನ್ನು ಕರೆದಿದ್ದರು.ನನಗೆ ಬಂದು ರಾಜಸ್ಥಾನದಲ್ಲಿ ಇರಲು ತಿಳಿಸಲಾಯಿತು. ಕುಟುಂಬ ಸಮೇತ ಕಫೀಲ್ ಖಾನ್ ಜಯಪೂರ್ ತಲುಪಿದ್ದಾರೆ. ಕೆಲಸಕ್ಕೆ ಮರಳಲು ಅನುಮತಿ ಕೋರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆಯುವುದಾಗಿ ಹೇಳಿದರು. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನದೇ ರಾಜ್ಯಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಕಫೀಲ್ ಖಾನ್ ತಿಳಿಸಿದರು.

ಸೆಪ್ಟೆಂಬರ್ 1 ರಂದು ಅಲಹಾಬಾದ್ ಹೈಕೋರ್ಟ್ ಕಫೀಲ್ ಖಾನ್ ಗೆ ಜಾಮೀನು ನೀಡಿತು. ನ್ಯಾಯಾಲಯವು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ರದ್ದುಗೊಳಿಸಿ ಅವರನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಡಿಸೆಂಬರ್ 12 ರಂದು ಅಲಿಗರ್ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡುವಾಗ ದ್ವೇಷದ ಭಾಷಣ ಮಾಡಿದ ಆರೋಪದ ಮೇಲೆ ಕಫೀಲ್ ಖಾನ್ ಅವರನ್ನು ಯುಪಿ ಪೊಲೀಸರು ಬಂಧಿಸಿದ್ದರು.ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಕೊರತೆಯಿಂದಾಗಿ 60 ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ಅವರು ಸರ್ಕಾರವನ್ನು ಟೀಕಿಸಿದ್ದರು.

Share this on:
error: Content is protected !!