Latest Posts

1.75 ಲಕ್ಷ ಮನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ನಿರ್ಮಿಸಲಾದ 1.75 ಲಕ್ಷ ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಮನೆಗಳನ್ನು ಉದ್ಘಾಟಿಸಿದ ಮೋದಿ, ಈ ಯೋಜನೆಯಡಿ ಸವಲತ್ತುಗಳನ್ನು ಪಡೆದ ಧಾರ್, ಸಿಂಗ್ರೌಲಿ ಮತ್ತು ಗ್ವಾಲಿಯರ್ ಪ್ರದೇಶಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಕೇವಲ ಮನೆಗಳನ್ನು ನಿರ್ಮಿಸುವುದಲ್ಲ, ಅದು ಆತ್ಮವಿಶ್ವಾಸವನ್ನು ಬೆಳೆಸುವುದು ಮತ್ತು ಬಡವರಿಗೆ ಸಬಲೀಕರಣ ನೀಡುವುದಾಗಿದೆ ಎಂದು ಹೇಳಿದರು.

Share this on:
error: Content is protected !!