Latest Posts

ನರೇಗಾ’ ರೂವಾರಿ ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಸಿಂಗ್ ನಿಧನ

ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಅವರು ರವಿವಾರ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಬಿಹಾರ ಮೂಲದ ರಘುವಂಶ ಪ್ರಸಾದ್ ಅವರಿಗೆ 74 ವರ್ಷ ವಯಸ್ಸಾಗಿತ್ತು.
ರಘುವಂಶ ಪ್ರಸಾದ್ ಸಿಂಗ್ ಅವರಿಗೆ ಜೂನ್ ನಲ್ಲಿ ಕೋವಿಡ್ ಸೋಂಕು ದೃಢವಾಗಿತ್ತು. ಈ ಕಾರಣಕ್ಕೆ ಏಮ್ಸ್ ಗೆ ದಾಖಲಾಗಿದ್ದ ಅವರು ಕೋವಿಡ್ ಗುಣಮುಖರಾದ ನಂತರ ಇತರ ಸಮಸ್ಯೆಗಳಿಗಾಗಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಅದಲ್ಲದೆ ಕಳೆದ ಶುಕ್ರವಾರದಿಂದ ವೆಂಟಿಲೇಟರ್ ಸಹಕಾರದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.


ಲೋಕಸಭೆಗೆ ಐದು ಬಾರಿ ಆಯ್ಕೆಯಾಗಿದ್ದ ರಘುವಂಶ ಪ್ರಸಾದ್ ಸಿಂಗ್ ಅವರು 2014 ಮತ್ತು 2019ರ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ನರೇಗಾ ಯೋಜನೆಯ ಹಿಂದಿನ ರೂವಾರಿ ರಘುವಂಶ ಪ್ರಸಾದ್ ಎನ್ನಲಾಗಿತ್ತು.
ಇತ್ತೀಚೆಗಷ್ಟೇ ರಘವಂಶ ಪ್ರಸಾದ್ ಅವರು ರಾಷ್ಟ್ರೀಯ ಜನತಾ ದಳ ಪಕ್ಷ ತೊರೆದಿದ್ದರು.

Share this on:
error: Content is protected !!