Latest Posts

ಸುಶಾಂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣ: ರಿಯಾ ಅವರ ಜಾಮೀನು ಅರ್ಜಿ ತಿರಸ್ಕಾರ

ನವದೆಹಲಿ: ಸುಶಾಂತ್ ಅವರ  ಸಾವಿಗೆ ಸಂಭಂದಿಸಿದ  ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಶೋಯೆಬ್ ಚಕ್ರವರ್ತಿ, ರಿಯಾ ಚಕ್ರವರ್ತಿ, ಅಬ್ದುಲ್ ಬಸಿತ್, ಸೈಯದ್ ವಿಲಾತ್ರಾ, ದೀಪೇಶ್ ಸಾವಂತ್ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ ಅವರ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯ ತಿರಸ್ಕರಿಸಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬಂಧಿಸಲಾಗಿರುವ ಎಲ್ಲ ಎಂಟು ಜನರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ.

ರಿಯಾ ಚಕ್ರವರ್ತಿ ಬೈಕುಲ್ಲಾ ಜೈಲಿನಲ್ಲಿ ಉಳಿಯಲಿದ್ದಾರೆ.  ಸೆಪ್ಟೆಂಬರ್ 22 ರವರೆಗೆ ಮ್ಯಾಜಿಸ್ಟ್ರೇಟ್ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಿಕೊಂಡ ನಂತರ ಈ ವಿಚಾರಣೆ ನಡೆದಿದೆ.   ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸುವುದು ರಿಯಾ ಅವರ ವಕೀಲರ ಮುಂದಿನ ನಡೆ ಎಂದು ವರದಿಯಾಗಿದೆ.

  ಯಾವುದೇ ಅಪರಾಧ ಮಾಡದೆ ಪ್ರತಿವಾದಿಯನ್ನು ಪ್ರಕರಣದಲ್ಲಿ ಸೇರಿಸಿಕೊಳ್ಳಲಾಗಿದೆ ಮತ್ತು ತಪ್ಪೊಪ್ಪಿಗೆ ಹೇಳಿಕೆ ನೀಡಲು  ಒತ್ತಾಯಿಸಲಾಗಿದೆ ಎಂದು ರಿಯಾ ಅವರ ಜಾಮೀನು ಅರ್ಜಿಯಲ್ಲಿ ತಿಳಿಸಿದೆ,.

ಅದೇ ಸಮಯದಲ್ಲಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಸಾಕ್ಷ್ಯಗಳು ನಾಶವಾಗುತ್ತವೆ ಮತ್ತು ಹಣ ಬಲದಲ್ಲಿ ಪ್ರಮುಖ ಸಾಕ್ಷಿಗಳ ನಾಶವಾಗುವ ಸಾಧ್ಯತೆ ಇದೆ  ಎಂದು ವಾದಿಸಿದರು.  ರಿಯಾ ಚಕ್ರವರ್ತಿ ತನ್ನ ಗೆಳೆಯ ಸುಶಾಂತ್ ಸಿಂಗ್ ರಜಪೂತ್‌ ಮಾದಕ ದ್ರವ್ಯ ಸೇವನೆಯ ಬಗ್ಗೆ ಸ್ಪಷ್ಟವಾಗಿ ತಿಳಿದಿರುತ್ತಾರೆ  ಎಂದು ಎನ್‌ಸಿಬಿ ಹೇಳಿದೆ.

ಎನ್‌ಸಿಬಿಯ ವಾದವನ್ನು ನ್ಯಾಯಾಲಯ ಅಂಗೀಕರಿಸಿ ಜಾಮೀನು ನಿರಾಕರಿಸಿದೆ.

Share this on:
error: Content is protected !!