ನವದೆಹಲಿ: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿರುವವರಿಗಾಗಿ ವಿಶೇಷ ಮಾರ್ಗಸೂಚಿ ಹೊರಡಿಸಿರುವ ಕೇಂದ್ರ ಸರ್ಕಾರ ಹಲವು ಸಲಹೆ ಸೂಚನೆಗಳನ್ನು ನೀಡಿದೆ.
ಹೆಚ್ಚಾಗಿ ಬಿಸಿನೀರು ಸೇವಿಸುವುದು, ಕೆಮ್ಮು ಇದ್ದಲ್ಲಿ ಆಯುಷ್ ಔಷಧಿಗಳನ್ನು ಸೇವಿಸುವುದು ಸೇರಿದಂತೆ ಇನ್ನಿತರ ಮಾರ್ಗೋಪಾಯಗಳನ್ನೂ ಕೇಂದ್ರ ಸರ್ಕಾರ ತನ್ನ ಗೈಡ್ಲೈನ್ಸ್ನಲ್ಲಿ ಉಲ್ಲೇಖಿಸಿದೆ.
ಮಾರ್ಗಸೂಚಿಯ ಮುಖ್ಯಾಂಶಗಳು:
1.ಆಗಾಗ್ಗೆ ಚಿಕಿತ್ಸೆ ತೆಗೆದುಕೊಳ್ಳಬೇಕು, ಅಥವಾ ಆಗಾಗ್ಗೆ ವೈದ್ಯರನ್ನು ಸಂಪರ್ಕಿಸಿ
2.ಹೋಮ್ ಐಸೋಲೇಷನ್ನಲ್ಲಿ ಇರುವವರಲ್ಲಿ ನಿರಂತರ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಹತ್ತಿರದ ವೈದ್ಯರ ಬಳಿ ಕರೆದೊಯ್ಯಬೇಕು
3.ಇಮ್ಯುನಿಟಿ ಹೆಚ್ಚಿಸುವ ಆಯುಷ್ನ ಚವನ್ಪ್ರಾಶ್, ಆಯುಷ್ ಕ್ವಾಥ್, ಅರಿಶಿಣ ಮಿಶ್ರಿತ ಹಾಲು, ಸಂಶಮಣಿ ವಟಿ, ಅಶ್ವಗಂಧ, ನೆಲ್ಲಿಕಾಯಿ ಸೇವಿಸಬೇಕು.
4.ದೈನಂದಿನ ವ್ಯಾಯಾಮಗಳಾದ ಯೋಗಾಸನ, ಪ್ರಾಣಾಯಮ, ಧ್ಯಾನ ಮಾಡುವುದು.
5.ಬೆಳಗ್ಗೆ ಸಂಜೆ ಕೆಲದೂರ ನಡೆಯುವ ಅಭ್ಯಾಸ ಮಾಡಿಕೊಳ್ಳಿ.