ದೆಹಲಿ: ದೆಹಲಿ ಗಲಭೆ ಗೆ ಸಂಭಂಧಿಸಿ ದೆಹಲಿ ಪೋಲಿಸರು ಸಲ್ಲಿಸಿದ ಪೂರಕ ಆರೋಪ ಪಟ್ಟಿಯಲ್ಲಿ ಯೆಚೂರಿ ಸೇರಿದಂತೆ ಹಲವರ ಹೆಸರುಗಳನ್ನು ಸೇರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಕೇಂದ್ರ ಸರಕಾರದ ತಾಳಕ್ಕೆ ಕುಣಿಯುವ ದೆಹಲಿ ಪೋಲಿಸರ ನಡೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿದೆ.
ಯೆಚೂರಿಯನ್ನು ಬೆಂಬಲಿಸಿ ಹಲವು ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ನೀಡಿದ್ದಾರೆ.ಚಾರ್ಜ್ ಶೀಟ್ ಸಲ್ಲಿಸುವ ಮೊದಲು ದೆಹಲಿ ಪೋಲಿಸರು ತನಿಖೆ ಮಾಡಲು ಮರೆತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಚಿದಂಬರಂ ವ್ಯಂಗ್ಯವಾಡಿದ್ದಾರೆ.ಕೇರಳ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ,ಮುನವ್ವರಲೀ ಶಿಹಾಬ್ ತಂಙಲ್,ಮುಸ್ಲಿಂ ಲೀಗ್ ಎಂಪಿ ಇಟಿ ಬಶೀರ್,ಕೆಎಂ ಶಾಜಿ ಇನ್ನಿತರ ಮುಖಂಡರು ದೆಹಲಿ ಪೋಲಿಸರ ನಡೆಯನ್ನು ತೀವ್ರವಾಗಿ ಖಂಡಿಸಿದರು.ಸಂಸತ್ತಿನಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ಮತ್ತು ಎಡರಂಗ ಪಕ್ಷಗಳು ತೀರ್ಮಾನಿಸಿವೆ.