ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಸೇರಿದಂತೆ ಕನಿಷ್ಠ 17 ಲೋಕಸಭಾ ಸದಸ್ಯರಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ. ಇಂದು ಪ್ರಾರಂಭವಾದ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ನಡೆಸಿದ ಕಡ್ಡಾಯ ಕೊರೊನಾ ಪರೀಕ್ಷೆಗಳಲ್ಲಿ ಈ ವರದಿ ಹೊರಬಂದಿದೆ.
ಸೋಂಕಿತರಲ್ಲಿ 12 ಬಿಜೆಪಿ ಸಂಸದರು, ವೈಎಸ್ಆರ್ ಕಾಂಗ್ರೆಸ್ ಪಕ್ಷದ 2 ಸಂಸದರು, ಶಿವಸೇನೆಯ 2 ಸಂಸದರು ಮತ್ತು ಓರ್ವ ಡಿಎಂಕೆ ಸಂಸದರು ಸೇರಿದ್ದಾರೆ.