ನವದೆಹಲಿ: ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್.ಬಿ.ಐ ತನ್ನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯ ದರಗಳನ್ನು ಕಡಿತಗೊಳಿಸಿದೆ.
ಇದು ಹೊಸ ಠೇವಣಿ ಮತ್ತು ನವೀಕರಿಸಬಹುದಾದ ಠೇವಣಿಗಳಿಗೆ ಅನ್ವಯಿಸಲಾಗಿದ್ದು,ಏಳು ದಿನಗಳಿಂದ 45 ದಿನಗಳ ಸ್ಥಿರ ಠೇವಣಿಗಳ ಬಡ್ಡಿ ದರವು ಈಗ ಶೇಕಡಾ 2.90 ಆಗಿದೆ, ಈ ಹಿಂದೆ 3.40 ಆಗಿತ್ತು.
2 ಕೋಟಿ ರೂಗಳಿಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಲಾಗಿದೆ, ಒಂದು ವರ್ಷದ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ! 4.40 ಕ್ಕೆ ಇಳಿಸಲಾಗಿದೆ. ಐದರಿಂದ ಹತ್ತು ವರ್ಷಗಳ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡ 5.40 ಕ್ಕೆ ಏರಿಸಲಾಗಿದೆ.