Latest Posts

ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾಗೆ ಕೊರೊನಾ ಪಾಸಿಟಿವ್

ದೆಹಲಿ: ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರದ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ ಮನೀಷ್ ಸಿಸೋಡಿಯಾ ತನಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವ ಕುರಿತು ಮಾಹಿತಿ ನೀಡಿದ್ದಾರೆ.

ಟ್ವೀಟ್​ನಲ್ಲಿ.. ಸಣ್ಣ ಜ್ವರ ಕಾಣಿಸಿಕೊಂಡ ಹಿನ್ನೆಲೆ ಇಂದು ಕೊರೊನಾ ಪರೀಕ್ಷೆ ಮಾಡಿಸಿಕೊಂಡೆ. ನನ್ನ ರಿಪೋರ್ಟ್ ಪಾಸಿಟಿವ್ ಎಂದು ಬಂದಿದೆ. ಹೀಗಾಗಿ ಏಕಾಂತದಲ್ಲಿ ಉಳಿದಿದ್ದೇನೆ. ಸದ್ಯ ಜ್ವರವಾಗಲೀ ಇತರೆ ಸಮಸ್ಯೆಯಾಗಲೀ ಇಲ್ಲ. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ನಿಮ್ಮ ಆಶೀರ್ವಾದ ಪಡೆದು ಶೀಘ್ರವೇ ಕೆಲಸಕ್ಕೆ ಮರಳಲಿದ್ದೇನೆ ಎಂದಿದ್ದಾರೆ.

Share this on:
error: Content is protected !!