ನವದೆಹಲಿ: ಕೋವಿಡ್ ಹಿನ್ನೆಲೆಯಲ್ಲಿ ಸಂಸದರ ವೇತನವನ್ನು ಶೇ 30 ರಷ್ಟು ಕಡಿಮೆ ಮಾಡುವ ಮಸೂದೆಯನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ.
ಮಸೂದೆಯ ಚರ್ಚೆಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಕೋವಿಡ್ ವಿರುದ್ಧ ಹೋರಾಡಲು ಹಣದ ಅಗತ್ಯವಿದೆ ಮತ್ತು ‘ದಾನವು ಮನೆಯಿಂದಲೇ ಪ್ರಾರಂಭವಾಗಬೇಕು’ ಎಂದು ಹೇಳಿದರು. ಎಂಪಿ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಲ್ಡಿಎಸ್) ಅನ್ನು ಎರಡು ವರ್ಷಗಳವರೆಗೆ ರದ್ದುಗೊಳಿಸಲಾಗುವುದು ಎಂದರು.
ಸಂಸದರ ವೇತನವನ್ನು ಕಡಿತಗೊಳಿಸುವ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದರೂ, ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಎಂಪಿಎಲ್ಡಿಎಸ್ ಹಣವನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿವೆ. ಲೋಕಸಭೆಯ ಕಾಂಗ್ರೆಸ್ ಮುಖಂಡ ಆದಿರ್ ರಂಜನ್ ಚೌಧರಿ ಮಾತನಾಡಿ, ಎಂಪಿಎಲ್ಡಿಗಳ ಹಣವನ್ನು ಆಯಾ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿರುವುದರಿಂದ ಅವುಗಳನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.