ನವದೆಹಲಿ: ಕೃಷಿ ಮಸೂದೆ ಬಗ್ಗೆ ರೈತರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ರೈತರನ್ನು ಗೊಂದಲಗೊಳಿಸುವುದು ಪ್ರತಿಪಕ್ಷಗಳ ಗುರಿ. ರಾಜ್ಯಸಭೆಯಲ್ಲಿ ನಡೆದ ಘಟನೆ ಖಂಡನೀಯ. ಪ್ರತಿಪಕ್ಷಗಳು ಪ್ರಜಾಪ್ರಭುತ್ವಕ್ಕೆ ಅನುಕೂಲಕರವಲ್ಲದ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ರಾಜನಾಥ್ ಸಿಂಗ್ ಆರೋಪಿಸಿದರು.
ನಾನೊಬ್ಬ ಕೃಷಿಕ,ಸರ್ಕಾರವು ರೈತರಿಗೆ ನೋವುಂಟು ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದರು.
ಉಪಸಭಾಧ್ಯಕ್ಷರೊಂದಿಗೆ ನಡೆದುಕೊಂಡ ರೀತಿ ದುರದೃಷ್ಟಕರ.ಅವರ ಹತ್ತಿರ ಹೋಗಿ ರೂಲ್ಬುಕ್ ಹರಿದು ಹಾಕಿದ್ದು ರಾಜ್ಯಸಭೆ ಅಥವಾ ಲೋಕಸಭೆಯ ಇತಿಹಾಸದಲ್ಲೇ ಎಂದೂ ನಡೆದಿಲ್ಲ ಎಂದರು.