Latest Posts

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ಕಅಬಾ ಶೈಲಿಯ ಮಸೀದಿ: ಬಾಬರ್ ಹೆಸರನ್ನು ಕೈಬಿಟ್ಟ ಟ್ರಸ್ಟ್

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಮಸೀದಿಯನ್ನು ಮಕ್ಕಾದ ಕಾಬಾದಲ್ಲಿ ಮಾದರಿಯಾಗಿಸಲಾಗುವುದು ಎಂದು ಮಸೀದಿ ನಿರ್ಮಾಣ ಟ್ರಸ್ಟ್ ತಿಳಿಸಿದೆ.  ಈ ವಿನ್ಯಾಸವು ದೇಶದ ಇತರ ಮಸೀದಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಮತ್ತು ವಾಸ್ತುಶಿಲ್ಪಿ ಅತ್ತಾರ್ ಹುಸೇನ್ ಹೇಳಿದ್ದಾರೆ.

ಅಯೋಧ್ಯೆ ಮಸೀದಿಯನ್ನು ಮಕ್ಕಾದ ಕಾಬಾ ಮಾದರಿಯಲ್ಲಿ ಸಾಂಪ್ರದಾಯಿಕ ಮೊಘಲ್ ಮಾದರಿಯ ಬದಲು ಆಯತಾಕಾರದ ಆಕಾರದಲ್ಲಿ ನಿರ್ಮಿಸಲಾಗುವುದು ಎಂದು ಹುಸೇನ್ ಹೇಳಿದರು.  ಹೊಸ ಮಸೀದಿಯಲ್ಲಿ ಮಿನಾರ್‌ಗಳು ಮತ್ತು ಗುಮ್ಮಟಗಳು ಇರುವುದಿಲ್ಲ.  ಅಲ್ಲದೆ, ಮಸೀದಿಯ ಹೆಸರು ಬಾಬರಿ ಮಸೀದಿ ಆಗುವುರುದಿಲ್ಲ. ಮಸೀದಿಗೆ ಚಕ್ರವರ್ತಿಗಳು ಅಥವಾ ರಾಜರ ಹೆಸರನ್ನು ಇಡಲಾಗುವುದಿಲ್ಲ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಿಸಲಾಗುವುದು. ಮಸೀದಿ 15,000 ಚದರ ಅಡಿ ಇರುತ್ತದೆ.  ಆದರೆ, ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.  ಬಾಬರಿ ಮಸೀದಿಯ ವಿಸ್ತೀರ್ಣವೂ 15,000 ಚದರ ಅಡಿಗಳಷ್ಟಿತ್ತು.

ಮಸೀದಿ ನಿರ್ಮಾಣಕ್ಕೆ ವಿಶ್ವಾಸಿಗಳು ಕೊಡುಗೆ ನೀಡಬಹುದು.  ಸಂಕೀರ್ಣದಲ್ಲಿ ವಸ್ತುಸಂಗ್ರಹಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇರುತ್ತದೆ.  ಆದರೆ, ದೇಣಿಗೆ  ಸ್ವೀಕರಿಸುವ ಬಗ್ಗೆ ಇನ್ನೂತೀರ್ಮಾನ ಕೈಗೊಂಡಿಲ್ಲ   ಎಂದು ಹುಸೇನ್ ಹೇಳಿದ್ದಾರೆ.

Share this on:
error: Content is protected !!