Latest Posts

SDPI ಕಾರ್ಯಕರ್ತ ಸಲಾಹುದ್ದೀನ್ ಕೊಲೆ:ಪೋಲಿಸರು ತಲುಪುವ ಮೊದಲೇ ಪರಾರಿಯಾದ ಆರೋಪಿಗಳು

ಕಣ್ಣೂರು: ಕನ್ನವತ್ತಿನ ಎಸ್‌ಡಿಪಿಐ ಕಾರ್ಯಕರ್ತ ಮುಹಮ್ಮದ್ ಸಲಾಹುದ್ದೀನ್ ಕೊಲೆ ಪ್ರಕರಣದಲ್ಲಿ ಉಳಿದ ಆರೋಪಿಗಳು ಪೊಲೀಸರು ತಲುಪುವ ಮುನ್ನವೇ ಅಡಗುತಾಣದಿಂದ ತಪ್ಪಿಸಿಕೊಂಡಿದ್ದಾರೆ.ವಯನಾಡ್ ಪ್ರದೇಶದ ಮನೆಯೊಂದರಲ್ಲಿ ಅಡಗಿಕೊಂಡಿದ್ದ ಆರೋಪಿಗಳು ಪೊಲೀಸರು ಬರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ ಕೂಡಲೇ ಅಂದು ರಾತ್ರಿಯೇ ಪರಾರಿಯಾಗಿದ್ದಾರೆ.

ಸೆಪ್ಟೆಂಬರ್ 8 ರಂದು ಸಲಾಹುದ್ದೀನ್ ಅಪರಿಚಿತರಿಂದ ಕೊಲ್ಲಲ್ಪಟ್ಟಿದ್ದರು.ಆರ್‌ಎಸ್‌ಎಸ್ ಕಾರ್ಯಕರ್ತರಾದ ಇಬ್ಬರು ಪ್ರಮುಖ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದರು. ಇನ್ನೂ ಐದು ಮಂದಿ ಆರೋಪಿಗಳನ್ನು ಇನ್ನೂ ಪತ್ತೆಹಚ್ಚಲು ಆಗಿಲ ಎಂದು ಪೋಲಿಸರು ಹೇಳಿದ್ದಾರೆ.

Share this on:
error: Content is protected !!