Latest Posts

ಬಾಬರಿ ತೀರ್ಪು: ಜಾತ್ಯತೀತತೆಯ ಮನೋಭಾವಕ್ಕೆ ನೀಡಿದ ಹೊಡೆತ ಎಂದ ಸಮಸ್ತ

ಕೋಝಿಕೋಡ್: ಬಾಬರಿ ಮಸೀದಿ ಕೆಡವಿದ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ ಲಖನೌ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಸಮಸ್ಥ ಪ್ರತಿಕ್ರಿಯಿಸಿದೆ. ಈ ತೀರ್ಪು ಜಾತ್ಯತೀತತೆಯ ಮನೋಭಾವಕ್ಕೆ ನೀಡಿದ ಹೊಡೆತವಾಗಿದೆ ಎಂದು ಸಮಸ್ಥ ಕೇರಳ ಜಮ್ ಇಯ್ಯತುಲ್ ಉಲೆಮಾ ಅಧ್ಯಕ್ಷ ಸೈಯದ್ ಮೊಹಮ್ಮದ್ ಜಿಫ್ರಿ ಮುತ್ತುಕೋಯಾ ತಂಙಳ್ ಹೇಳಿದ್ದಾರೆ.

ಪ್ರೊ.ಕೆ.ಅಲಿಕುಟ್ಟಿ ಮುಸ್ಲಿಯಾರ್ ಮಾತನಾಡಿ ಪ್ರಕರಣದ ಎಲ್ಲ 32 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಸೀದಿಯ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲು ಈ ಹಿಂದೆ ಅವಕಾಶ ಕಲ್ಪಿಸಿರುವುದರಿಂದಲೇ ದೇಶದ ಜಾತ್ಯತೀತ ಸಮುದಾಯವು ತೀವ್ರ ದುಃಖಿತವಾಗಿದೆ. ಮಸೀದಿ ಕೆಡವಿದ ಪ್ರಕರಣದಲ್ಲಿ ಆರೋಪಿಗಳು ಪಿತೂರಿ ನಡೆಸಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತಿದೆ ಎಂಬ ಇಂದಿನ ನ್ಯಾಯಾಲಯದ ತೀರ್ಪು ಭಾರತದ ಜಾತ್ಯತೀತತೆಗೆ ಕಳಂಕ ತಂದಿದೆ ಎಂದರು.

ಬಾಬರಿ ಮಸೀದಿಯನ್ನು ನೆಲಸಮ ಮಾಡಿದವರಿಗೆ ಶಿಕ್ಷೆಯಾಗದೇ ಇರುವುದು ದುರದೃಷ್ಟಕರ ಮತ್ತು ತೀರ್ಪಿನ ವಿರುದ್ಧ ತನಿಖಾ ಸಂಸ್ಥೆ ಕೂಡಲೇ ಮೇಲ್ಮನವಿ ಸಲ್ಲಿಸಬೇಕು ಎಂದು ಪಾಣಕ್ಕಾಡ್ ಮುಸ್ಲಿಂ ಲೀಗ್ ರಾಜ್ಯ ಅಧ್ಯಕ್ಷ ಹೈದರಲೀ ಶಿಹಾಬ್ ತಂಙಳ್ ಹೇಳಿದ್ದಾರೆ.
ಬಾಬರಿ ಮಸೀದಿಯನ್ನು ಕಾನೂನುಬಾಹಿರವಾಗಿ ಮತ್ತು ಹಿಂಸಾತ್ಮಕವಾಗಿ ನೆಲಸಮ ಮಾಡಿದವರಿಗೆ ಶಿಕ್ಷೆಯಾಗದೇ ಇರುವುದು ದುರದೃಷ್ಟಕರ ಎಂದು ಅವರು ಹೇಳಿದರು. ತನಿಖಾ ಸಂಸ್ಥೆ ತಕ್ಷಣ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ಪ್ರತಿಯೊಬ್ಬರೂ ಶಾಂತಿ ಕಾಪಾಡಬೇಕು ಮತ್ತು ಧಾರ್ಮಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.

Share this on:
error: Content is protected !!