ನವದೆಹಲಿ: ಹತ್ರಾಸ್ ಘಟನೆ ಕುರಿತು ಭೀಮ್ ಆರ್ಮಿ ಮುಖಂಡ ಚಂದ್ರಶೇಖರ್ ಆಜಾದ್ ಮಾಡಿದ ಟ್ವೀಟ್ ಸದ್ಯ ವೈರಲ್ ಆಗಿದೆ. ನಮಗೆ ಶಸ್ತ್ರಾಸ್ತ್ರ ಪರವಾನಗಿ ಸಿಕ್ಕರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಎಂದು ಚಂದ್ರಶೇಖರ್ ಆಜಾದ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
“ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಸ್ವರಕ್ಷಣೆಗಾಗಿ ಹಕ್ಕನ್ನು ಸಂವಿಧಾನವು ನೀಡಿದೆ. ದೇಶದ 20 ಲಕ್ಷ ಬರುವ ಬಹುಜನ್ ಸಮುದಾಯದವರಿಗೆ ಆದಷ್ಟು ಬೇಗ ಶಸ್ತ್ರಾಸ್ತ್ರ ಪರವಾನಗಿ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ. ಬಂದೂಕುಗಳು ಮತ್ತು ಪಿಸ್ತೂಲ್ಗಳನ್ನು ಖರೀದಿಸಲು ನಮಗೆ ಶೇಕಡಾ 50 ರಷ್ಟು ಸಹಾಯಧನವನ್ನು ನೀಡಬೇಕು.ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ”ಎಂದು ಅವರು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮ್ ಸೇನೆಯ ಮುಖಂಡ ಚಂದ್ರಶೇಖರ್ ಆಜಾದ್ ಬೃಹತ್ ಪ್ರತಿಭಟನೆ ನಡೆಸಿದ್ದರು.