Latest Posts

ಬಿಹಾರ ಚುನಾವಣೆ: ಮೋದಿ ಆಪ್ತ ಮಿತ್ರ ನಿತೀಶ್ ಕುಮಾರ್ ಸೋಲಿಸಲು ಬಿಜೆಪಿ-ಎಲ್‌ಜೆಪಿ ರಹಸ್ಯ ಸಭೆ

ನವದೆಹಲಿ: ಬಿಜೆಪಿ ಮತ್ತು ಎಲ್‌ಜೆಪಿ ನಿತೀಶ್ ಕುಮಾರ್ ವಿರುದ್ಧ ಸಂಚು ರೂಪಿಸುತ್ತಿವೆ ಎಂದು ವರದಿಯಾಗಿದೆ.ಸೀಟ್ ಹಂಚಿಕೆ ವಿವಾದದಿಂದಾಗಿ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್‌ಜೆಪಿ ಎನ್‌ಡಿಎ ತೊರೆದಿದ್ದು ಇದೇ ಸಮಯದಲ್ಲಿ, ಅವರು ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಯು ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರು.

ಎನ್‌ಡಿಎ ತೊರೆದರೂ ಬಿಜೆಪಿಯನ್ನು ಬೆಂಬಲಿಸುವುದಾಗಿ ಎಲ್‌ಜೆಪಿ ಹೇಳಿತ್ತು. ಅತಿದೊಡ್ಡ ಏಕ ಪಕ್ಷ ಎಂಬ ನಿತೀಶ್ ಕುಮಾರ್ ಅವರ ಗುರಿಯನ್ನು ತಡೆಯಲು ಬಿಜೆಪಿ ಮತ್ತು ಎಲ್‌ಜೆಪಿ ಕಾರ್ಯತಂತ್ರವನ್ನು ಹೆಣೆದಿದೆ.ಬಿಹಾರದಲ್ಲಿ ಮತ್ತೊಮ್ಮೆ ನಿತೀಶ್ ಕುಮಾರ್ ಗದ್ದುಗೆ ಏರುವ ಕನಸನ್ನು ಸ್ವತಃ ಬಿಜೆಪಿ ನುಚ್ಚುನೂರು ಮಾಡಿದೆ. ಬಿಹಾರ ಚುನಾವಣೆಯಲ್ಲಿ ಪ್ರಮುಖ ಶಕ್ತಿಯಲ್ಲದಿದ್ದರೂ, ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ನಿತೀಶ್ ಕುಮಾರ್ ಅವರನ್ನು ದುರ್ಬಲಗೊಳಿಸುವುದು ಎಲ್‌ಜೆಪಿಯ ತಂತ್ರವಾಗಿದ್ದು ಎಲ್ಜೆಪಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ನೀಡಿದ ಹೇಳಿಕೆ ಹಲವು ಸಂಶಯಕ್ಕೆ‌ ಎಡೆಮಾಡಿಕೊಟ್ಟಿದೆ.

ಜೆಡಿಯು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಎಲ್‌ಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಮತ್ತು ಚುನಾವಣೆಯ ನಂತರ ಬಿಜೆಪಿ-ಎಲ್ಜೆಪಿ ಮೈತ್ರಿ ಸರಕಾರ ರಚನೆಯಾಗುತ್ತದೆ ಎಂದು ಈ ಹಿಂದೆ ಹೇಳಿಕೆಯನ್ನು ನೀಡಿದ್ದರು.ಸ್ಥಾನ ಹಂಚಿಕೆಯ ಮೊದಲೇ ಎನ್‌ಡಿಎ ಮೈತ್ರಿಕೂಟದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ಸೋಲಿನ ಭೀತಿ ಎದುರಾಗಿದೆ.

Share this on:
error: Content is protected !!