Latest Posts

ವಿಶ್ವದಲ್ಲೇ ಅತೀ ಹೆಚ್ಚು ಸಂತೃಪ್ತ ಜೀವನವನ್ನು ನಡೆಸುವವರು ಭಾರತೀಯ ಮುಸ್ಲಿಮರು:ಮೋಹನ್ ಭಾಗವತ್

ಹೊಸದಿಲ್ಲಿ : “ವಿಶ್ವದಲ್ಲೇ ಅತೀ ಹೆಚ್ಚು ಸಂತೃಪ್ತ ಜೀವನವನ್ನು ನಡೆಸುವವರು ಭಾರತೀಯ ಮುಸ್ಲಿಮರು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಭಾರತದ ಜೀವಾಳದ ವಿಷಯ ಬಂದಾಗ ಎಲ್ಲಾ ಧರ್ಮಗಳ ಜನರೂ ಜತೆಯಾಗಿ ನಿಂತಿದ್ದಾರೆ.

ಸ್ವಹಿತಾಸಕ್ತಿ ಸಾಧಿಸಲು ಸಾಧ್ಯವಾಗದೇ ಇರುವವರು ಮತಾಂಧತೆ ಮತ್ತು ಪ್ರತ್ಯೇಕತಾವಾದವನ್ನು ಹರಡುವವರು ಎಂದೂ ಭಾಗ್ವತ್ ಹೇಳಿದ್ದಾರೆ.
ಭಾಗ್ವತ್ ಅವರು ಮಹಾರಾಷ್ಟ್ರದ ಹಿಂದಿ ಮ್ಯಾಗಝಿನ್ ‘ವಿವೇಕ್’ಗೆ ನೀಡಿದ ಸಂದರ್ಶನದಲ್ಲಿ ಮೇಲಿನಂತೆ ಹೇಳಿದ್ದಾರೆ. ಮೇವಾರದ ರಾಜ ಮಹಾರಾಣ ಪ್ರತಾಪನ ಸೇನೆಯಲ್ಲಿ ಹಲವಾರು ಮುಸ್ಲಿಮರಿದ್ದರು ಹಾಗೂ ಮುಘಲ್ ದೊರೆ ಅಕ್ಬರ್ ವಿರುದ್ಧ ಹೋರಾಡಿದ್ದರು ಎಂದು ಭಾಗ್ವತ್ ಹೇಳಿದರು.

“ಅತ್ಯಂತ ಹೆಚ್ಚು ಸಂತೃಪ್ತ ಮುಸ್ಲಿಮರು ಭಾರತದಲ್ಲಿ ಮಾತ್ರ ಇದ್ದಾರೆ,” ಎಂದು ಹೇಳಿದ ಭಾಗ್ವತ್, ಒಂದು ಕಾಲದಲ್ಲಿ ದೇಶವೊಂದನ್ನು ಆಳಿದ ವಿದೇಶಿ ಧರ್ಮವೊಂದು ಆ ದೇಶದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಉದಾಹರಣೆ ಜಗತ್ತಿನಲ್ಲಿ ಬೇರೆ ಎಲ್ಲಿಯಾದರೂ ಇದೆಯೇ ಎಂದು ಪ್ರಶ್ನಿಸಿದರಲ್ಲದೆ “ಎಲ್ಲಿಯೂ ಇಲ್ಲ, ಭಾರತದಲ್ಲಿ ಮಾತ್ರ,” ಎಂದರು.


“ಕೇವಲ ಹಿಂದುಗಳು ಮಾತ್ರ ಇಲ್ಲಿರಬಹುದು ಹಾಗೂ ಇಲ್ಲಿರಬೇಕಾದರೆ ಹಿಂದುಗಳ ಪಾರಮ್ಯವನ್ನು ಒಪ್ಪಿಕೊಳ್ಳಬೇಕೆಂದು ನಮ್ಮ ಸಂವಿಧಾನ ಹೇಳಿಲ್ಲ. ನಾವು ಅವರಿಗಾಗಿ ಸ್ಥಳಾವಕಾಶ ಸೃಷ್ಟಿಸಿದೆವು. ಇದು ನಮ್ಮ ದೇಶದ ಪ್ರಕೃತಿ ಹಾಗೂ ಆ ಅಂತರ್ಗತ ಪ್ರಕೃತಿಯನ್ನು ಹಿಂದು ಎಂದು ಕರೆಯಲಾಗುತ್ತದೆ,” ಎಂದು ಭಾಗವತ್ ಹೇಳಿದರು.

ಅಯ್ಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರವನ್ನು ಉಲ್ಲೇಖಿಸಿದ ಅವರು ಅದು ಕೇವಲ ಆರಾಧನೆ ಉದ್ದೇಶಕ್ಕೆ ಸೀಮಿತವಾಗಿರುವುದಿಲ್ಲ, ಅದು ರಾಷ್ಟ್ರೀಯ ಮೌಲ್ಯಗಳ ದ್ಯೋತಕವಾಗಲಿದೆ ಎಂದರು.

Share this on:
error: Content is protected !!